ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ಶ್ರೀ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆರಂಭಗೊಂಡ ಮಂಜೇಶ್ವರ ಉಪಜಿಲ್ಲಾಮಟ್ಟದ ಕ್ರೀಡಾಮೇಳಕ್ಕೆ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ. ಆರ್. ಶೆಟ್ಟಿ ಚಾಲನೆ ನೀಡಿದರು.
ಮೀಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರುಕಿಯಾ ಕೆ.ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪೋಲೀಸ್ ಠಾಣೆ ಅಧಿಕಾರಿ ರಾಜನ್ ಕೆ. ಮುಖ್ಯ ಅತಿಥಿಯಾಗಿದ್ದರು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತ ಮಾತನಾಡಿದರು. ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ. ಎಂ.ಎಲ್, ಪ್ರಮುಖರಾದ ಜನಾರ್ದನ ಪೂಜಾರಿ, ಕುಸುಮಾ, ಮಿಸ್ರಿಯ ಕೆ, ವಿನೋದಾ ಜಿ., ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ರಾಜೇಶ್ವರಿ ಎಸ್. ರಾವ್, ಎಡ್ವಿನ್ ವಿನ್ಸೆಂಟ್ ಕೊರಿಯ, ಇಬ್ರಾಹಿಂ ಹೊನ್ನಕಟ್ಟೆ, ಶಾಲಿನಿ ಬಿ. ಶೆಟ್ಟಿ, ಶಾಮ ಭಟ್ ಯು, ಸುರೇಶ ಬಂಗೇರ, ಗ್ಯಾರಿ ಗಿಲ್ಮೋರ್, ಹಮೀದ್ ಮೈತಾಳ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರಮೇಶ್ ಕೆ.ಎನ್ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಮೃದುಲಾ ಕೆ.ಎಂ ವಂದಿಸಿದರು.