ಜಿಲ್ಲೆ

ಐತಿಹಾಸಿಕ ಸ್ಥಳಗಳಿಗೆ ವಿದ್ಯಾರ್ಥಿಗಳ ಭೇಟಿ

ಇಂದಿರಾ ಎನ್ ಕೆ

ಬ್ರಹ್ಮಾವರ: ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನ ಅಂಗವಾಗಿ ತುಳುನಾಡಿನ ರಾಜಧಾನಿ ಬಾರಕೂರಿನಲ್ಲಿ ಬಸ್ರೂರು ಶ್ರೀ ಶಾರದಾ ಕಾಲೇಜಿನ ಇತಿಹಾಸ ವಿಭಾಗ, ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬಾರಕೂರು ಮತ್ತು ಹನೆಹಳ್ಳಿ ಗ್ರಾಪಂ ಮತ್ತು ನಾನಾ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬುಧವಾರ ಪರಂಪರೆ ನಡಿಗೆ ಕಾರ್ಯಕ್ರಮ ಮಣೆಗಾರಕೇರಿ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ಬಿ.ಜಗದೀಶ ಶೆಟ್ಟಿ ಉದ್ಘಾಟಿಸಿದರು.

120ಕ್ಕೂ ಅಧಿಕ ವಿದ್ಯಾರ್ಥಿಗಳು ಬಾರಕೂರಿನ ಕಲ್ಲುಚಪ್ಪರದಿಂದ ಹೊರಟು ಐತಿಹಾಸಿಕ ಸ್ಥಳಗಳು, ಶಿಲಾಶಾಸನಗಳು ಜೈನಬಸದಿ, ಕೋಟೆಯ ಅವಶೇಷ, ಪಾಳುಬಿದ್ದ ದೇವಸ್ಥಾನ, ಹೊಸ ದೇವಸ್ಥಾನ, ಚರ್ಚ್‌ಸೇರಿದಂತೆ ಅನೇಕ ಕಡೆಗಳಿಗೆ ಉಪನ್ಯಾಸಕರೊಂದಿಗೆ ಭೇಟಿ ನೀಡಿದರು.

ಕಾರ್ಯಕ್ರಮ ಸಂಯೋಜಕ ಶ್ರೀ ಶಾರದಾ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ, ಡಾ.ಜಯರಾಮ ಶೆಟ್ಟಿಗಾರ್, ವಿಶ್ವನಾಥ ಆಚಾರ್, ನಾಗರಾಜ ಶೆಟ್ಟಿ, ದೀಪಕ್‌ಕುಮಾರ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಎಸ್, ನಾರಾಯಣ ವೈ., ಪ್ರಮೀಳಾ ಇತರರು ಇದ್ದರು.