ಜಿಲ್ಲೆ

ಕೆಪಿಎಸ್ ಕೋಟೇಶ್ವರದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

ಕೋಟ: ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತೆಯ ಸಚಿವಾಲಯ ಇಲಾಖೆ ಉಪಕ್ರಮದ ಭಾಗವಾಗಿ ಕರ್ನಾಟಕ ಸಮಗ್ರ ಶಿಕ್ಷಣ ಇಲಾಖೆ ಆಯೋಜಿಸಿದ ಕಲೋತ್ಸವ 2024-25ರಲ್ಲಿ ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿಗಳಾದ ಮಾನ್ವಿ ಮತ್ತು ಸಂಜನಾ ಸಾಂಪ್ರದಾಯಿಕ ಕಥೆ ಹೇಳುವ ವಿಭಾಗದಲ್ಲಿ ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಾಯನ ಸಂಗೀತ ವಿಭಾಗದ ಜನಪದ ಬುಡಕಟ್ಟು ವಿಭಾಗದಲ್ಲಿ ವೈಷ್ಣವಿ ಮತ್ತು ತಂಡ ಜಿಲ್ಲಾಮಟ್ಟದಲ್ಲಿ ಚತುರ್ಥ ಸ್ಥಾನ ಪಡೆದಿದ್ದಾರೆ. ಸಂಸ್ಥೆಯ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಮತ್ತು ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.