ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಭವಿಷ್ಯದ ಜೀವನಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಜೋಕಿಂ ಫರ್ನಾಂಡಿಸ್ ಹೇಳಿದರು.
ಕಿನ್ನಿಗೋಳಿ ಸೇಂಟ್ ಮೇರಿಸ್ ಸೆಂಟ್ರಲ್ ಶಾಲೆ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಶಾಲೆ ನಿರ್ದೇಶಕ ಪ್ರೊ.ಮಾಥ್ಯೂ ಸಿ.ನೈನನ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ನಿಟ್ಟೆ ವಿದ್ಯಾಸಂಸ್ಥೆ ಪ್ರಾಧ್ಯಾಪಕಿ ಸ್ಮಿತಾ ರೈ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು.
ಚರ್ಚ್‌ನ ಸಹಾಯಕ ಧರ್ಮಗುರು ಸ್ಟೀವನ್ ಜೊಯಲ್ ಕುಟಿನ್ನೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿಲಿಯಂ ಡಿಸೋಜ, ಶಾಲಾ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಸ್ಟಾೃನಿ ಪಿಂಟೋ, ಕಾರ್ಯದರ್ಶಿ ದಿವ್ಯಾ ಪಿಂಟೋ, ಸ್ಟೀವನ್ ಡಿಕುನ್ನಾ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಪ್ರಾಚಾರ‌್ಯ ಲಾನ್ಸಿ ಜೊವೆಲ್ ಸಲ್ದಾನಾ ಶಾಲಾ ವರದಿ ವಾಚಿಸಿದರು. ಶಿಕ್ಷಕಿ ವೀಣಾ ಶೆಟ್ಟಿ ಸ್ವಾಗತಿಸಿದರು. ಅಗಸ್ಟಿನ್ ವಂದಿಸಿದರು. ರೋಮಿಯ್ ಡಿಕೊಸ್ತಾ, ಲವಿನಾ ಕಾರ್ಡೂಜಾ ಕಾರ್ಯಕ್ರಮ ನಿರೂಪಿಸಿದರು.