ಜಿಲ್ಲೆ

ಬಸ್ ಇಲ್ಲದೆ ಕತ್ತಲೆಯಲ್ಲಿ ವಿದ್ಯಾರ್ಥಿಗಳ ಪರದಾಟ; ಸಾರಿಗೆ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ

Webdesk - Ravikanth

ಗದಗ: ಸರಿಯಾದ ಸಮಯಕ್ಕೆ ಬಸ್ ಬರದ ಕಾರಣ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾದು, ಕತ್ತಲೆಯಲ್ಲಿ ಆತಂಕವನ್ನೂ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶವೂ ವ್ಯಕ್ತವಾಗಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸ್ ಬರದೆ ವಿದ್ಯಾರ್ಥಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಟ ನಡೆಸಿದ್ದಾರೆ.

ಇಟಗಿ ಬಸ್ ನಿಲ್ದಾಣದಿಂದ ತೆರಳಬೇಕಾಗಿದ್ದ ಸುಮಾರು 70 ವಿದ್ಯಾರ್ಥಿಗಳ ತೊಂದರೆ ಅನುಭವಿಸಬೇಕಾಗಿ ಬಂದಿದೆ. ತೊಂದರೆಗೆ ಒಳಗಾದವರಲ್ಲಿ ವಿವಿಧ ಹೈಸ್ಕೂಲ್-ಕಾಲೇಜು ವಿದ್ಯಾರ್ಥಿಗಳು ಇದ್ದಾರೆ.