padagrahana 
ಜಿಲ್ಲೆ

ವಿದ್ಯಾರ್ಥಿ ಸಂಸತ್ ಪದಗ್ರಹಣ

Karthika K.S

ಗಂಗೊಳ್ಳಿ: ಮೇಲ್‌ಗಂಗೊಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಹವೇ)ಯ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ ಪದಗ್ರಹಣ ಕಾರ್ಯಕ್ರಮ ಗುರುವಾರ ನಡೆಯಿತು.

ಮುಖ್ಯಶಿಕ್ಷಕ ಗುರುರಾಜ್ ಆಚಾರ್ಯ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ನಾಯಕಿ ರಶ್ಮಿತಾ ಅನಿಸಿಕೆ ಹಂಚಿಕೊಂಡರು. ಸಹಶಿಕ್ಷಕ ಯೋಗೀಶ್, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ ಖಾರ್ವಿ, ಅಡುಗೆ ಸಹಾಯಕಿ ಶಕುಂತಲಾ ಖಾರ್ವಿ, ಜ್ಯೋತಿ ಆನಂದ ಇನ್ನಿತರರು ಉಪಸ್ಥಿತರಿದ್ದರು.

ಉಪ ಮುಖ್ಯಮಂತ್ರಿ ಇರ್ಷಾದ್ ಸ್ವಾಗತಿಸಿದರು. ಶಿಕ್ಷಣ ಮಂತ್ರಿ ಸಾನ್ವಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಮಂತ್ರಿ ಅನ್ವಿತಾ ವಂದಿಸಿದರು.