ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡಿದ ಉಪನ್ಯಾಸಕಿ ಕಾವೇರಿ ಬೋಲ ಸನ್ಮಾನಿಸಲಾಯಿತು. ಪ್ರಾಚಾರ್ಯ ಗವಿಸಿದ್ದಪ್ಪ ಮುತ್ತಾಳ, ಉಪನ್ಯಾಸಕರಾದ ಮಲ್ಲಿಕಾರ್ಜುನ, ಇಬ್ರಾಹಿಂಸಾಬ, ಇಮಾಮಸಾಬ, ಪ್ರದೀಪ ಪಲ್ಲೇದ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳ ಅತಿಯಾದ ಮೋಬೈಲ್ ಬಳಕೆ ಸಲ್ಲ

ಅಳವಂಡಿ: ತಾಂತ್ರಿಕ ಯುಗದಲ್ಲಿ ಅಂಗೈಯಲ್ಲಿ ಎಲ್ಲ ಮಾಹಿತಿ ದೊರೆಯುತ್ತಾದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಮುಂಡರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಕಾವೇರಿ ಬೋಲ ತಿಳಿಸಿದರು.

ಗ್ರಾಮದ ಶಿವಮೂರ್ತಿಸ್ವಾಮಿ ಇನಾಮದಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದಡಿ ಆಯೋಜಿಸಿದ್ದ ‘ಭೂಮಿ ತಾಯಿಯ ಚೊಚ್ಚಲ ಮಗ’ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಬದುಕಿನಲ್ಲಿ ಸಾಧನೆ ಮಾಡಲು ಛಲದಿಂದ ಪ್ರಯತ್ನ ಪಡಬೇಕು. ವಿದ್ಯಾರ್ಥಿಗಳು ಮೋಬೈಲ್ ಅನ್ನು ಸಾಧನ ರೀತಿಯಲ್ಲಿ ಬಳಸಿ, ಅತಿ ಬಳಕೆಯಿಂದ ಅಮೂಲ್ಯವಾದ ಜೀವನವನ್ನು ನಾಶ ಮಾಡಿಕೊಳ್ಳದಿರಿ. ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ.

ಯೋಗ ಅಭ್ಯಾಸ ರೂಡಿಸಿಕೊಳ್ಳಬೇಕು ಇದು ಉತ್ಸಾಹದಿಂದ ಇರಲು ಸಹಾಯಕವಾಗಿದೆ. ದ.ರಾ.ಬೇಂದ್ರೆ ಸಾಹಿತ್ಯ ಕೇವಲ ಅಕ್ಷರಸ್ಥರು ಮಾತ್ರವಲ್ಲ ಅನಕ್ಷರಸ್ಥರು ಇಷ್ಟಪಡುತ್ತಿದ್ದರು. ಪ್ರತಿಯೊಬ್ಬರ ಮನಸ್ಸಿಗೆ ತಟ್ಟುವಂತೆ ಇರುತ್ತಿತ್ತು. ಭೂಮಿ ತಾಯಿಯ ಚೊಚ್ಚಲ ಮಗ ಕವನ ಸಂಕಲನದಲ್ಲಿ ರೈತರ ಸಮಸ್ಯೆ ಕುರಿತು ಬರೆದಿದ್ದಾರೆ ಎಂದರು.

ಪ್ರಾಚಾರ್ಯ ಗವಿಸಿದ್ದಪ್ಪ ಮುತ್ತಾಳ ಮಾತನಾಡಿ. ದ.ರಾ.ಬೇಂದ್ರೆ ಭೂಮಿ ತಾಯಿಯ ಚೊಚ್ಚಲ ಮಗ ಕವನ ಸಂಕಲನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಆದರೆ, ಇಂದಿಗೂ ಸಮಸ್ಯೆಗಳಿಗೆ ಪರಿಹಾರ ಸಿಕಿಲ್ಲ. ಅದೇ ಸ್ಥಿತಿಯಲ್ಲಿ ರೈತರು ಜೀವನ ನಡೆಸುತ್ತಿದ್ದಾರೆ.

ಇಂದಿಗೂ ರೈತರು ಬಂಡವಾಳ ಶಾಹಿಗಳ ಕೈಯಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿದ್ದು, ಸರಿಯಾಗಿ ಬೆಳೆ ಬರುತ್ತಿಲ್ಲ ಬೆಳೆಗೆ ತಕ್ಕ ಲಾಭನೂ ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಐಕ್ಯೂಎಸಿ ಸಂಯೋಜಕ, ಇಂಗ್ಲಿಷ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ, ಉಪನ್ಯಾಸಕರಾದ ಇಬ್ರಾಹಿಂಸಾಬ, ಇಮಾಮಸಾಬ, ಪ್ರದೀಪ ಪಲ್ಲೇದ, ವೆಂಕಟೇಶ, ವಿಜಯಕುಮಾರ, ಅನಿಲ, ವಿನಾಯಕ, ವೀರಯ್ಯ, ರಹಿಮಾನಸಾಬ, ರಾಘವೇಂದ್ರ, ಹನುಮೇಶ, ಸಿದ್ದಪ್ಪ ಇದ್ದರು.