More

    ವಿದ್ಯಾರ್ಥಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು: ಡಾ.ಜ್ಯೋತಿ ಶಂಕರ್

    ಮೈಸೂರು: ನಿರಂತರವಾಗಿ ತರಬೇತಿ ನೀಡುತ್ತಾ ನೂರಾರು ಜನ ಶಿಷ್ಯರನ್ನು ರೂಪಿಸಿದ ಗಮಕದ ಜತೆಜತೆಗೆ ಬದುಕಿನ ರೀತಿಯನ್ನೂ ಕಲಿಸಿದ ಗಂಭೀರ ವ್ಯಕ್ತಿತ್ವ ಗಮಕಿ ಕೃ.ರಾಮಚಂದ್ರ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಬಣ್ಣಿಸಿದರು.
    ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಗಮಕಿ ಕೃ.ರಾಮಚಂದ್ರ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದ್ದು. ಬದುಕಿನ ಸಂಬಂಧಗಳ ಸೂತ್ರಧಾರರಾಗಿ ನೂರಾರು ಜನರಿಗೆ ವೇದಿಕೆ ಕಲ್ಪಿಸಿಕೊಟ್ಟವರು. ಅಂತಹವರಿಗೆ ಕುಮಾರವ್ಯಾಸ ಪ್ರಶಸ್ತಿ ಬಂದಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.
    ಸಮಾರಂಭ ಉದ್ಘಾಟಿಸಿದ ಸಂಸ್ಕೃತ ವಿದ್ವಾಂಸ ಡಾ.ಎಚ್‌ವಿ.ನಾಗರಾಜರಾವ್ ಮಾತನಾಡಿ, ಪ್ರಶಸ್ತಿ ಪುರಸ್ಕಾರಗಳಿಗೆಂದೂ ಅಪೇಕ್ಷೆ ಪಡೆದ ಮೇರು ವ್ಯಕ್ತಿತ್ವ ಕೃ.ರಾಮಚಂದ್ರ ಅವರದ್ದು. ಕಾಲ ಯಾವುದಿದ್ದರೂ ಅರ್ಹ ವ್ಯಕ್ತಿಗೆ ಮನ್ನಣೆ ದೊರಕೇ ದೊರಕುತ್ತದೆ ಎಂಬುದಕ್ಕೆ ಕೃ.ರಾಮಚಂದ್ರ ಅವರು ಸಾಕ್ಷಿಯಾಗಿದ್ದಾರೆ. ಗಮಕದ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದು, ಕುಮಾರ ವ್ಯಾಸ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದರು.
    ಗಮಕಿ ಕೃ.ರಾಮಚಂದ್ರ, ಡಾ.ತುಳಸಿ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್, ಲೀಲಾಪ್ರಕಾಶ್, ರಂಗನಾಥ್, ವಿಜಯಲಕ್ಷ್ಮೀ, ಮಾನುಷ ಇತರರು ಇದ್ದರು. ನಂತರ ಬಿ.ಪಿ.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗಳು ಕಂಡ ಶ್ರೀರಾಮ ಕವಿಗೋಷ್ಠಿಯಲ್ಲಿ 15 ಜನ ಆಹ್ವಾನಿತ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts