ಕಾಸರಗೋಡು: ಕಳೆದ ಎರಡು ತಿಂಗಳಿನಿಂದ ಜ್ವರಕ್ಕೆ ತುತ್ತಾಗಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಮೃತಪಟ್ಟಿದ್ದಾನೆ. ಬೋವಿಕ್ಕಾನ ನಿವಾಸಿ ಬಿ.ಕೆ. ನಜುದ್ದೀನ್-ಸಾಜಿದಾ ದಂಪತಿ ಪುತ್ರ ಮಿಸ್ಬಾ (12)ಮೃತಪಟ್ಟ ವಿದ್ಯಾರ್ಥಿ. ಕುವೈತ್‌ನ ಜಬ್ರಿಯಾ ಭಾರತೀಯ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾದ ಮಿಸ್ಬಾಗೆ ಎರಡು ತಿಂಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಜುದ್ದೀನ್ ಕುಟುಂಬ ಕುವೈತ್‌ನಿಂದ ಊರಿಗೆ ವಾಪಸಾಗಿ ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.