ಜಿಲ್ಲೆ

ಜಮಖಂಡಿಯ ಪಿಜಿಯಲ್ಲಿ ನೇಣು ಬಿಗಿದುಕೊಂಡ ಕಾಲೇಜು ವಿದ್ಯಾರ್ಥಿನಿ

lakshmihegde

ಬಾಗಲಕೋಟೆ: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಮಖಂಡಿ ನಗರದ ಪಿಜಿಯೊಂದರಲ್ಲಿ ನಡೆದಿದೆ.

ಅಥಣಿ ತಾಲೂಕಿ ಶಿರಟ್ಟಿ ಗ್ರಾಮದ ಗಂಗವ್ವ ಕಾಸಂಬಿ (21) ಮೃತ ವಿದ್ಯಾರ್ಥಿನಿ. ಈಕೆ ಬಿ.ಕಾಂ. ಅಂತಿಮ ಪದವಿ ಓದುತ್ತಿದ್ದಳು. ಜಮಖಂಡಿಯ ಪಿಜಿಯಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.