ಸಿರಿಗೇರಿ ಸಮೀಪ ಹಾವಿನಾಳು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ತುಂಬಿ ನೀರು ಪೋಲಾಗುತ್ತಿರುವುದು. 
ಜಿಲ್ಲೆ

ಹಾವಿನಾಳು ಗ್ರಾಮದಲ್ಲಿ ನೀರಿಗಾಗಿ ಪರದಾಟ

ಗಾಯತ್ರಿ ಮಾಲಿಪಾಟೀಲ್

ಸಿರಿಗೇರಿ: ಹಾವಿನಾಳು ಗ್ರಾಮದ 2ನೇ ವಾರ್ಡಿನ ಎರ‌್ರಿತಾತ ದೇವಸ್ಥಾನದ ಹತ್ತಿರ ಸಾರ್ವಜನಿಕರು ಕಳೆದ ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಕುರಿತಾಗಿ ಗ್ರಾಮಾಡಳಿತಕ್ಕೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.

ಕುಡಿಯುವ ನೀರಿನ ಟ್ಯಾಂಕ್ ಬಳಿ ಮಂಗಳವಾರ ಸಾರ್ವಜನಿಕರು ಜಮಾಯಿಸಿ ಟ್ಯಾಂಕ್ ತುಂಬಿ, ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದ್ದರೂ ಗ್ರಾಪಂ ಸದಸ್ಯರು, ಸಿಬ್ಬಂದಿ ಗಮನಿಸುತ್ತಿಲ್ಲ. ಕೂಡಲೇ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದರು.

ಪಿಡಿಒ ಕೆ.ಬಸವರಾಜ ಮಾತನಾಡಿ, ವಾರ್ಡಿನ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಸದಸ್ಯರು ನನಗೆ ತಿಳಿಸಿದ್ದರೆ ಬಗೆಹರಿಯುತ್ತಿತ್ತು. ಅದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಬೈರಾಪುರ ಕಾಡಪ್ಪ, ರಾಘವೇಂದ್ರ, ಸುರೇಶ, ಮಲ್ಲಯ್ಯ, ಹೊನ್ನೂರಪ್ಪ, ಮಹೇಶ್, ಎಚ್.ಎಂ.ಶೇಖರಪ್ಪ, ಬಿ.ನಾಗೇಂದ್ರ, ವಿ.ಹನುಮೇಶ್, ದೊಡ್ಡ ಮಾರೆಪ್ಪ, ಭರಮಪ್ಪ ಇತರರಿದ್ದರು.