ಸಂಡೂರು ಎಸ್‌ಆರ್‌ಎಸ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ನಡೆಯಿತು. ಸ್ಮಯೋರ್ ಸಂಸ್ಥೆ ಎಂಡಿ ಬಹಿರ್ಜಿ ಘೋರ್ಪಡೆ, ರಾಜಮನೆತನದ ಏಕಾಂಬರ್ ಘೋರ್ಪಡೆ, ಶಿವಪುರ ಶಿಕ್ಷಣ ಸಮಿತಿ ಕಾರ್ಯದರ್ಶಿ ಆಶಿಯಾ ಬಾನು, ಎಸ್‌ಆರ್‌ಎಸ್ ಶಾಲೆಯ ಪ್ರಾಂಶುಪಾಲ ಎಸ್.ಮುರಳಿಕೃಷ್ಣಾ ಇದ್ದರು. 
ಜಿಲ್ಲೆ

ಒತ್ತಡದಿಂದ ಬಿಡುಗಡೆ ಹೊಂದುಲು ವ್ಯಾಯಾಮ ಅಗತ್ಯ

Kopala - Desk - Eraveni

ಸಂಡೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ ಭಾರತದಲ್ಲಿ ಹುಟ್ಟಿದ್ದು ಹೆಮ್ಮೆಯ ವಿಷಯ. ಒತ್ತಡದ ಬದುಕಿನಲ್ಲಿ ಯೋಗಾಭ್ಯಾಸವನ್ನು ಜೀವನ ಶೈಲಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಶಿವಪುರ ಶಿಕ್ಷಣ ಸಮಿತಿ ಅಧ್ಯಕ್ಷೆ ಯಶೋಧರ ಘೋರ್ಪಡೆ ಹೇಳಿದರು.

ಪಟ್ಟಣದ ಎಸ್‌ಆರ್‌ಎಸ್ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಸ್ಮಯೋರ್ ಸಂಸ್ಥೆ ಎಂಡಿ ಬಹಿರ್ಜಿ ಘೋರ್ಪಡೆ ಮಾತನಾಡಿ, ದೇಹ ಮತ್ತು ಮನಸ್ಸಿನ ಬಲವರ್ಧನೆಗೆ ಯೋಗದ ಅವಶ್ಯಕವಾಗಿದೆ.

ಒಂದು ಭೂಮಿ ಒಂದು ಆರೋಗ್ಯ ಎಂಬ ಘೋಷಣೆಯೊಂದಿಗೆ ಭಾರತ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದರು. ಯೋಗ ಶಿಕ್ಷಕ ಸಂಜಯ್ ಮಕ್ಕಳಿಗೆ ಆಸನಗಳನ್ನು ಹೇಳಿಕೊಟ್ಟರು.