ಜಿಲ್ಲೆ

ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆ: ಕ್ಯಾಪ್ಟನ್​ ಡಾ. ಕೆ. ರಾಜೇಂದ್ರ ಹೇಳಿಕೆ

ಬೆಂಗಳೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಸೇವಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಿದರೆ ಜನರಿಗೆ ಸಾಕಷ್ಟು ಅನುಕೂಲವಾಗುವ ಮೂಲಕ ಗ್ರಾಮೀಣಾಭಿವೃದ್ಧಿಯಾಗಲಿದೆ ಎಂದು ಸಹಕಾರ ಸಂಗಳ ನಿಬಂಧಕ ಕ್ಯಾಪ್ಟನ್​ ಡಾ.ಕೆ. ರಾಜೇಂದ್ರ ಹೇಳಿದ್ದಾರೆ.

ರಾಷ್ಟ್ರೀಯ ಸಹಕಾರ ಯೂನಿಯನ್​ ಸಹಯೋಗದಲ್ಲಿ ರಾಜ್ಯ ಸಹಕಾರ ಮಹಾಮಂಡಳ ರೇಸ್​ಕೋರ್ಸ್​ನ ಸಹಕಾರ ಮಹಾಮಂಡಳದ ಕಚೇರಿಯಲ್ಲಿ ಆಯೋಜಿಸಿದ್ದ "ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವೈವಿಧ್ಯಮಯ ಹಾಗೂ ವ್ಯಾಪಾರಭಿವೃದ್ಧಿ' ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸಹಕಾರ ಇಲಾಖೆಗಳು, ಕೃಷಿ ಪತ್ತಿನ ಸಹಕಾರ ಸಂಘಗಳು, ಕಾಸ್ಕಾರ್ಡ್​ ಗಣಕೀಕರಣದ ಮೂಲಕ ಸವಲತ್ತುಗಳು ಸುಲಭವಾಗಿ ಜನರಿಗೆ ತಲುಪಲು ಹಾಗೂ ಪಾರದರ್ಶಕ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದರು.

ರಾಷ್ಟ್ರೀಯ ಸಹಕಾರ ಯೂನಿಯನ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧೀರ್​ ಮಹಾಜನ್​ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಗಳನ್ನು ಪರಿಣಾಮಕಾರಿಯಾಗಿ ಬಲವರ್ಧನೆ ಮಾಡಿದರೆ ರೈತರಿಗೆ ತ್ವರಿಗತಿಯಲ್ಲಿ ಸೇವೆಗಳು ದೊರೆಯಲಿವೆ. ಈ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ ಎಂದು ಹೇಳಿದರು. ಸಹಕಾರ ಮಹಾಮಂಡಲದ ಎಂಡಿ ಕೆ.ಎಸ್​. ನವೀನ್​, ಕಾರ್ಯದರ್ಶಿ ಲಕ್ಷಿ$್ಮಪತಯ್ಯ, ಅಪೆಕ್ಸ್​ ಬ್ಯಾಂಕಿನ ತರಬೇತಿ ಕೇಂದ್ರದ ಪ್ರಾಂಶುಪಾಲೆ ಸುಜ್ಯೋತಿ ಮತ್ತಿತರರಿದ್ದರು.