ಜಿಲ್ಲೆ

ಮನೆಯೊಳಗೆ ನುಗ್ಗಿ ಚಿನ್ನ ಕಳವು

ಇಂದಿರಾ ಎನ್ ಕೆ

ಕಾರ್ಕಳ: ಬೆಳ್ಮಣ್ ಗ್ರಾಮದ ಜಂತ್ರ ಎಂಬಲ್ಲಿ ಮನೆಯೊಂದರ ಮುಂಬಾಗಿಲು ಮತ್ತು ಹಿಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಮನೆಯ ಒಡತಿ ಜೂಲಿಯಾನ ಮಥಾಯಸ್ ವಿದೇಶದಲ್ಲಿ ಉದ್ಯೋಗಿಯಾಗಿದ್ದು, ಮನೆ ಖಾಲಿ ಬಿಡಲಾಗಿತ್ತು. ಬಲವಾದ ಆಯುಧದಿಂದ ಮನೆ ಬಾಗಿಲು ಮುರಿದ ಕಳ್ಳರು, ಅಡುಗೆಕೋಣೆಯಲ್ಲಿ ಇಟ್ಟಿದ್ದ 15 ಗ್ರಾಂನ ಆರು ಜತೆ ಚಿನ್ನದ ಸಣ್ಣ ಓಲೆಗಳನ್ನು ಕಳವು ಮಾಡಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.