ರಬಕವಿ/ಬನಹಟ್ಟಿ : ನಿತ್ಯ ವ್ಯಾಯಾಮದಿಂದ ಉತ್ತಮ ಆರೋಗ್ಯ ಹೊಂದಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಕೊಣ್ಣೂರ ಸೌಹಾರ್ದ ಕ್ರೆಡಿಟ್ ಸೊಸೈಟಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಏರೋಬಿಕ್ ವ್ಯಾಯಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿನನಿತ್ಯದ ಸೋಮಾರಿತನ ನಿವಾರಿಸುವ ನಿಟ್ಟಿನಲ್ಲಿ ವ್ಯಾಯಾಮ ಅವಶ್ಯವಾಗಿದ್ದು, ಅದರಲ್ಲೂ ಏರೋಬಿಕ್ ವ್ಯಾಯಾಮ ದೈಹಿಕ, ಮಾನಸಿಕವಾಗಿ ನಮ್ಮನ್ನು ಸದೃಢವಾಗಿಸುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಸಾಮೂಹಿಕ ವ್ಯಾಯಾಮದಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಹೊಂದಿ ಎಂದರು.
ಇದನ್ನೂ ಓದಿ: ಬರದ ಛಾಯೆಗೆ ಕೃಷಿ ಕ್ಷೇತ್ರ ತಲ್ಲಣ!
ಪ್ರೊ. ಬಸವರಾಜ ಕೊಣ್ಣೂರ ಮಾತನಾಡಿ, ಸಂಗೀತದೊಂದಿಗೆ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಏರೋಬಿಕ್ ವ್ಯಾಯಾಮ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಧರೆಪ್ಪ ಉಳ್ಳಾಗಡ್ಡಿ, ಡಾ. ಪ್ರಭು ಪಾಟೀಲ, ಎಂ.ಎಸ್. ಬದಾಮಿ, ಬಸವರಾಜ ಜಾಡಗೌಡ, ಶ್ರೀಶೈಲ ಯಾದವಾಡ, ಗೋಪಾಲ ಭಟ್ಟಡ, ಬುಜಬಲಿ ಕೆಂಗಾಲಿ, ಜಿ.ಎಸ್. ಗೊಂಬಿ, ರವಿ ಹುಕ್ಕೇರಿ, ಎ್. ಬಿ. ತಳವಾರ, ಗೌರಿ ಮಿಳ್ಳಿ, ಅಮೀತ ನಾಶಿ, ಚಂದ್ರಕಾಂತ ಹೊಸೂರ, ಚಂದ್ರಶೇಖರ ಮಿರ್ಜಿ, ಸುರೇಶ ಚಿಂಡಕ, ಮುರಳಿ ಕಾಬರಾ, ಈರಯ್ಯ ಕಾಡದೇವರ, ಎಂ. ಬಿ. ಮಗದುಮ್, ಸಾಗರ ಬಾಡಗಿ ಇತರರಿದ್ದರು.