More

    ಬರದ ಛಾಯೆಗೆ ಕೃಷಿ ಕ್ಷೇತ್ರ ತಲ್ಲಣ!

    ಬಾಗಲಕೋಟೆ : ಕಳೆದ ಎರಡು ಮೂರು ವರ್ಷ ಪ್ರವಾಹ, ಅತಿವೃಷ್ಟಿಯಿಂದ ತೀವ್ರ ಸಂಕಷ್ಟ ಅನುಭವಿಸಿದ್ದ ಕೃಷಿ ಕ್ಷೇತ್ರ ಪ್ರಸಕ್ತ ವರ್ಷ ಮತ್ತೊಂದು ಸವಾಲು ಎದುರಿಸುತ್ತಿದೆ.

    ಮಳೆ ಅಭಾವದಿಂದ ಮುಂಗಾರು ಹಂಗಾಮಿನ ಬಿತ್ತನೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ವರುಣ ದೇವನ ಮುನಿಸಿಗೆ ಕೋಟೆನಾಡಿನ ಕೃಷಿ ಕ್ಷೇತ್ರದ ಮೇಲೆ ಆತಂಕದ ಛಾಯೆ ಆವರಿಸಿದೆ.

    ಪೂರ್ವ ಮುಂಗಾರು, ಮುಂಗಾರು ಮಳೆ ಅಂದುಕೊಂಡಂತೆ ಸುರಿಯದ ಪರಿಣಾಮ ಅಕ್ಷರಶಃ ಅನ್ನದಾತರು ದಿಕ್ಕು ತೋಚದಂತಾಗಿದ್ದಾರೆ. ಒಣಬೇಸಾಯ ಕೃಷಿ, ತೋಟಗಾರಿಕೆ ಕ್ಷೇತ್ರವು ಬರದ ಛಾಯೆಗೆ ನಲುಗಿ ಹೋಗಿವೆ. ಮಳೆರಾಯನೇ ಕೈಕೊಟ್ಟರೆ ಮುಂದಿನ ಬದುಕು ಹೇಗೆ ಅಂತ ಕೃಷಿಕರು ಗಾಬರಿ ಬಿದ್ದಿದ್ದಾರೆ.

    ಇದನ್ನೂ ಓದಿ: ಮಕರಸಂಕ್ರಾಂತಿಗೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ

    ಶೇ.70 ಬಿತ್ತನೆ ಕುಂಠಿತ : ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಚುರುಕು ಪಡೆದುಕೊಳ್ಳುತ್ತಿತ್ತು. ಆದರೆ ಮಳೆ ಕೊರತೆಯಿಂದಾಗಿ ಹದ ಮಾಡಿದ ಭೂಮಿಗೆ ಬಿತ್ತನೆ ಮಾಡದೆ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಬಿತ್ತನೆ ಗುರಿ ತಲುಪಲು ಸಾಧ್ಯವಾಗದ ಕಾರಣ ಆತಂಕ ಮನೆ ಮಾಡಿದೆ. ಪ್ರಸಕ್ತ ವರ್ಷ ಏಕದಳದಲ್ಲಿ ಮೆಕ್ಕೆಜೋಳವನ್ನು 42 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತುವ ಗುರಿ ಹೊಂದಲಾಗಿತ್ತು. 16,800 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ಸಜ್ಜೆ 30 ಸಾವಿರ ಹೆಕ್ಟೇರ್ ಪೈಕಿ 5 ಸಾವಿರ ಹೆಕ್ಟೇರ್, ದ್ವಿದಳ ವಿಭಾಗದಲ್ಲಿ 36 ಸಾವಿರ ಹೆಕ್ಟೇರ್ ತೊಗರಿ ಬಿತ್ತನೆ ಗುರಿ ಪೈಕಿ 9300 ಹೆಕ್ಟೇರ್, ಹೆಸರು 20 ಸಾವಿರ ಹೆಕ್ಟೇರ್ ಪೈಕಿ 6800, ಮಡಿಕೆ ಕಾಳು 1750 ಹೆಕ್ಟೇರ್ ಪೈಕಿ 700 ಹೆಕ್ಟೇರ್ ಆಗಿದೆ. ಎಣ್ಣೆ ಕಾಳುಗಳಲ್ಲಿ ಸೂರ್ಯಕಾಂತಿ 24,500 ಹೆಕ್ಟೇರ್ ಪ್ರದೇಶದ ಪೈಕಿ 3500 ಹೆಕ್ಟೇರ್, ಸೋಯಾಬೀನ್ 250 ಹೆಕ್ಟೇರ್ ಪೈಕಿ 600 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಇನ್ನು ಬಾಗಲಕೋಟೆ, ಮುಧೋಳ, ಬಾದಾಮಿ, ಬೀಳಗಿ, ಜಮಖಂಡಿ, ರಬಕವಿ-ಬನಹಟ್ಟಿ, ಇಳಕಲ್ಲ, ಹುನಗುಂದ, ಗುಳೇದಗುಡ್ಡ ತಾಲೂಕಿನಲ್ಲಿ ಒಣಬೇಸಾಯ ಕೃಷಿಯಲ್ಲಿ ಅಲ್ಲಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗುತ್ತಿವೆ. ಮೊಳಕೆ ಬಂದ ಬೆಳೆಗಳು ನೀರಿಲ್ಲದೆ ಕಣ್ಣು ಮುಂದೆ ಒಣಗುತ್ತಿರುವುದನ್ನು ನೋಡಿ ಕೃಷಿಕರು ಕಣ್ಣೀರು ಹಾಕುತ್ತಿದ್ದಾರೆ.
    ತೋಟಗಾರಿಕೆ ಕ್ಷೇತ್ರಕ್ಕೂ ಸಂಕಟ : ಮಳೆ ಕೊರತೆ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಳು ಗಗನಕ್ಕೆ ಏರಿವೆ. ಬೋರ್‌ವೆಲ್ ಮೂಲಕ ಬೆಳೆಯುವ ರೈತರು ಮಳೆ ಕೊರತೆ ಹಿನ್ನೆಲೆಯಲ್ಲಿ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಮುಖ್ಯವಾಗಿ ಟೊಮ್ಯಾಟೊ, ಈರುಳ್ಳಿ, ಮೆಣಸಿನಕಾಯಿ, ಬೆಂಡಿ, ಚವಳಿ, ಮೆಂತೆ, ಗಜ್ಜರಿ, ಮೂಲಂಗಿ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೆ ಏರಿದ ಪರಿಣಾಮ ಬಿತ್ತನೆಗೆ ಬೀಜಗಳ ಬೇಡಿಕೆ ಏರಿಕೆಯಾಗಿದೆ. ಆದರೆ, ನಿರೀಕ್ಷಿತ ಇಳುವರಿ ಬರುವ ಆಶಾಭಾವ ಇಲ್ಲ. ಬಾಳೆ, ಪಪ್ಪಾಯಿ, ದಾಳಿಂಬೆ, ದ್ರಾಕ್ಷಿ, ಚಿಕ್ಕು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಮಳೆ ಇಲ್ಲದೆ ಸಂಕಟಕ್ಕೆ ಸಿಲುಕಿವೆ. ಜುಲೈ ತಿಂಗಳ ಮಳೆ.
    ತಾಲೂಕು- ಆಗಬೇಕಿದ್ದ ಮಳೆ-ಆದ ಮಳೆ(ಎಂ.ಎಂ.ಗಳಲ್ಲಿ)
    ಬಾದಾಮಿ-31.9-30.02
    ಬಾಗಲಕೋಟೆ-28.5-33.7
    ಬೀಳಗಿ-26.8-22
    ಹುನಗುಂದ-32.6-27.8
    ಜಮಖಂಡಿ-29.1-17.2
    ಮುಧೋಳ-23.4-25.4
    ಗುಳೇದಗುಡ್ಡ-28-61.6
    ಇಳಕಲ್ಲ-29-18.4ರಬಕವಿ-ಬನಹಟ್ಟಿ-26.1-19.1 ಒಟ್ಟು-28.4-24.4

    ಮಳೆ ಕೊರತೆಯಿಂದಾಗಿ ಬಿತ್ತನೆ ಪ್ರಮಾಣ ಕುಸಿತವಾಗಿದೆ. ತೋಟಗಾರಿಕೆ ಬೆಳೆಗಳಿಗೂ ಸಮಸ್ಯೆ ಎದುರಾಗಿದೆ. ಟೊಮ್ಯಾಟೊ, ಈರುಳ್ಳಿ ಸೇರಿ ವಿವಿಧ ತರಕಾರಿ ಬೆಲೆ ಮಾರುಕಟ್ಟೆಯಲ್ಲಿ ಜಾಸ್ತಿ ಆಗಿದ್ದರಿಂದ ಬಿತ್ತನೆ ಬೀಜ ಬೇಡಿಕೆ ಅಲ್ಪಮಟ್ಟಿಗೆ ಏರಿಕೆ ಕಂಡಿದೆ. ಆದರೆ, ಸೂಕ್ತ ಇಳುವರಿ ಬರುವ ಬಗ್ಗೆ ಅನುಮಾನ ಕಾಡುತ್ತಿದೆ.ರವೀಂದ್ರ ಹಕಾಟೆ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ.

    ರವೀಂದ್ರ ಹಕಾಟೆ
    ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts