More

    ಮಕರಸಂಕ್ರಾಂತಿಗೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ

    ಗುಳೇದಗುಡ್ಡ: ಪ್ರಾಚೀನ ಶಿಲ್ಪ ಶಾಸ, ಆಧುನಿಕ ತಂತ್ರಜ್ಞಾನ ಬಳಸಿ ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಡೀ ವಿಶ್ವದ ಕನಸು ನನಸು ಮಾಡಿದ ಭವ್ಯ ಮಂದಿರ ಇದಾಗಿದೆ ಎಂದು ರಾಷ್ಟ್ರೀಯ ವಿಶ್ವ ಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ, ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಉಸ್ತುವಾರಿ ಗೋಪಾಲಜೀ ಹೇಳಿದರು.

    ಸ್ಥಳೀಯ ಭಂಡಾರಿ ಹಾಗೂ ರಾಠಿ ಕಾಲೇಜಿನ ಬಯಲು ಆವರಣದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರ ಸೊಸೆಯ ಸೀಮಂತ ಕಾರ್ಯಕ್ರಮದ ಸಂದರ್ಭದಲ್ಲಿ ಆಯೋಜಿಸಿದ್ದ ಮಂಗಲನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶ್ರೀರಾಮ ಮಂದಿರ ಇದು ವಿಶ್ವದ ಅತ್ಯಂತ ಶ್ರೇಷ್ಠ ಮಂದಿರವಾಗಲಿದೆ. 2024ರ ಮಕರ ಸಂಕ್ರಮಣ ನಂತರ ಮಂದಿರದಲ್ಲಿ ಶ್ರೀರಾಮಮೂರ್ತಿ ಪ್ರತಿಷ್ಠಾಪಿಸಿ ವಿಶ್ವದ ಜನರಿಗೆ ಶ್ರೀರಾಮನ ದರ್ಶನ ಮಾಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

    ವಿಶ್ವದ ಗ್ರಾಮ ಗ್ರಾಮಗಳಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಬೇಕು. ಶ್ರೀರಾಮ ಯಾವುದೇ ಜಾತಿ, ಪಕ್ಷ, ಪಂಗಡಕ್ಕೆ ಸೇರಿಲ್ಲ. ಸರ್ವ ಮನುಕುಲದ ಶ್ರೇಷ್ಠ ಮರ್ಯಾದಾ ಪುರುಷೋತ್ತಮ. ರಾಮನ ಮೂಲಕ ನಾವು ವಿಶ್ವದ ಬೆಳಕು ಕಾಣುತ್ತೇವೆ. ಅಯೋಧ್ಯೆಯಲ್ಲಿ ಭಾರತೀಯ ಸಂಸ್ಕೃತಿ, ರಾಮಾಯಣ ದರ್ಶನ ಮಾಡಿಸುವ ಮತ್ತು ಭಾರತದ ವಿಶೇಷ ಪರಂಪರೆಯನ್ನು ಇಡಿಯಾಗಿ ಪ್ರತಿಬಿಂಬಿಸಲಾಗುವುದು ಎಂದರು.

    ಭಾರತೀಯ ಜೀವನ ವಿಧಾನ ಬಗ್ಗೆ ಪ್ರತಿಯೊಬ್ಬರಲ್ಲಿ ಶ್ರದ್ಧೆ ಬೆಳೆಯಬೇಕು. ಅಂತಹ ಒಂದು ಕಾರ್ಯ ಶ್ರೀರಾಮ ಮಂದಿರದ ಮೂಲಕ ನಡೆಯಬೇಕಿದೆ ಎಂದರು.

    ಕರ್ನಾಟಕ ಉತ್ತರ ಪ್ರಾಂತ ಸಹ ಸಂಘ ಚಾಲಕ ಅರವಿಂದರಾವ್ ದೇಶಪಾಂಡೆ ಮಾತನಾಡಿದರು. ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಕಾಶೀನಾಥ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ, ಗುರುಬಸವ ದೇವರು, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ ಶೀಲವಂತ, ಶಿಲ್ಪಾ ಶೀಲವಂತ, ದೀಪಾ ಶೀಲವಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts