ಜಿಲ್ಲೆ

ಸಂಘ ಶಕ್ತಿ ಮಧೂರು ಚಾಂಪಿಯನ್ : ತೂಮಿನಾಡಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ

ಸೌಮ್ಯ ಆರ್

ಮಂಜೇಶ್ವರ: ತೂಮಿನಾಡು ಅರಬ್ ರೈಡರ್ಸ್ ಕ್ಲಬ್‌ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕೇರಳ ರಾಜ್ಯಮಟ್ಟದ 16 ತಂಡಗಳನ್ನೊಳಗೊಂಡ ಹೊನಲು ಬೆಳಕಿನ ಕೇರಳ ಸೀನಿಯರ್ ಕಬಡ್ಡಿ ಟೂರ್ನಮೆಂಟ್ ಸಮಾಪ್ತಿಗೊಂಡಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಪಂದ್ಯಾಟ ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಅಶ್ರಫ್ ಸಕ್ಲಿನ್ ಅಧ್ಯಕ್ಷತೆ ವಹಿಸಿದರು. ಪಂದ್ಯಾಟದ ಚೇರ‌್ಮನ್ ಇಲ್ಯಾಸ್ ತೂಮಿನಾಡು ಅತಿಥಿಗಳನ್ನು ಬರಮಾಡಿಕೊಂಡರು.

ಪಂದ್ಯಾಟದಲ್ಲಿ ಸಂಘ ಶಕ್ತಿ ಮಧೂರು ಮೊದಲ ಸ್ಥಾನ ಪಡೆದು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ರೆಡ್ ವರ್ಲ್ಡ್ ಕೊಪ್ಪಳ ದ್ವೀತಿಯ ಸ್ಥಾನದಲ್ಲಿ ತೃಪ್ತಿಪಟ್ಟುಕೊಂಡಿತು. ಎಕೆಜಿ ಆರಾಟ ಕಡವು ತೃತೀಯ ಸ್ಥಾನ ಪಡಕೊಂಡರೆ ತೂಮಿನಾಡು ಅರಬ್ ರೈಡರ್ಸ್ ನಾಲ್ಕನೇ ಸ್ಥಾನ ಪಡೆಯಿತು.

ಒಲಿಂಪಿಕ್ಸ್ ಮಾದರಿಯ ಕೇರಳದ ಮೊದಲ ರಾಜ್ಯ ಶಾಲಾ ಕ್ರೀಡಾಕೂಟದ ಸಬ್‌ಜೂನಿಯರ್ ವಿಭಾಗದ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅಂಗಡಿಮೊಗರು ಶಾಲಾ ವಿದ್ಯಾರ್ಥಿ ನಿಯಾಸ್ ಆಹ್ಮದ್ ಹಾಗೂ ಐಟಿ ವಿಭಾಗದಲ್ಲಿ ಉತ್ತಮ ಸಾಧನೆಗೈದ ಸಿರಾಜುಲ್ ಹುದಾ ಶಾಲಾ ವಿದ್ಯಾರ್ಥಿ ಅಫ್ತಾಬ್ ಫಯಾಝ್ , ಸಮಾಜ ಸೇವಕ ಇಲ್ಯಾಸ್ ತೂಮಿನಾಡು ಹಾಗೂ ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್, ಅಝೀಝ್ ಹಾಜಿ, ಮುಸ್ತಫ ಕಡಂಬಾರ್, ದಯಾಕರ ಮಾಡ, ಮುನೀರ್, ಮುಸ್ತಫ ಉದ್ಯಾವರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಅಬ್ದುಲ್ ಲತೀಫ್ ಬಾಬಾ, ಸಿದ್ದೀಖ್ ತಂಙಳ್, ಹಾಶಿಕ್, ಅನ್ವರ್, ತನ್ವೀರ್, ಇಸ್ಮಾಯಿಲ್, ತನ್ವೀರ್ ಆಹ್ಮದ್, ಸಮೀರ್ ಮೊದಲಾದವರು ನೇತೃತ್ವ ನೀಡಿದರು.