ವಸಂತಿ ಆರ್.ನಾಯ್ಕ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
ಜಿಲ್ಲೆ

ವಸಂತಿ.ಆರ್. ನಾಯ್ಕಗೆ ರಾಜ್ಯಮಟ್ಟದ ಪ್ರಶಸ್ತಿ

ಗೋಳಿಯಂಗಡಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಾನಸಿಕ ಆರೋಗ್ಯ ವಿಭಾಗದ ಮನೋ ಸಾವಾಜಿಕ ಕಾರ್ಯಕರ್ತೆ ವಸಂತಿ.ಆರ್.ನಾಯ್ಕರಿಗೆ ಮದರ್ ಆಫ್ ಸೋಷಿಯಲ್ ವರ್ಕ್ ಜೇನ್ ಆಡಮ್ಸ್ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ಪ್ರೊಫೆಷನಲ್ ಸೋಷಿಯಲ್ ವರ್ಕರ್ಸ್‌ ವೆಲ್ಫೇರ್ ಅಸೋಸಿಯೇಶನ್ ರಾಜ್ಯ ಸಮಿತಿ ವತಿಯಿಂದ ವಿಶ್ವ ಸಾವಾಜಿಕ ಕಾರ್ಯ ದಿನದ ನಿಮಿತ್ತ ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ವೃತ್ತಿಪರ ಸಾವಾಜಿಕ ಕಾರ್ಯಕರ್ತರ ಸವಾವೇಶ ಹಾಗೂ ಅಭಿನಂದನಾ ಸವಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯ ಪ್ರೊಫೆಷನಲ್ ಸೋಷಿಯಲ್ ವರ್ಕರ್ಸ್‌ ವೆಲ್ಫೇರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಸಂತೋಷಕುವಾರ್ ಎಂ., ದಾವಣಗೆರೆ ವಿಶ್ವವಿದ್ಯಾಲಯದ ಸವಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ.ಲೋಕೇಶ್, ರಾಜೇಂದ್ರ ಕುವಾರ್, ಮಹಾಲಿಂಗಪ್ಪ, ಡಾ.ಮಹೇಶ, ಡಾ.ಪಾಂಡುರಂಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.