ಕಂಪ್ಲಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 150 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಜನವಿರೋಧಿ ಬಿಜೆಪಿ ಆಡಳಿತಕ್ಕೆ ರಾಜ್ಯಾದ್ಯಂತ ಜನ ರೋಸಿ ಹೋಗಿದ್ದು ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ. ಆಪರೇಷನ್ ಕಮಲ ಭೀತಿ ತಪ್ಪಿಸಲು 150 ಸ್ಥಾನಗಳನ್ನು ಗಳಿಸಲೇಬೇಕಿದೆ ಎಂದರು.
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರಕ್ಕೆ ಅಧಿಕಾರದ ಚುಕ್ಕಾಣಿ: ಸಾಲಿಗ್ರಾಮದಲ್ಲಿ ಬಿಜೆಪಿ ಬೃಹತ್ ರೋಡ್ ಶೋ ಬಳಿಕ ಜೆ.ಪಿ.ನಡ್ಡಾ ಹೇಳಿಕೆ
ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್.ಗಣೇಶ್ ಮಾತನಾಡಿ, ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ನಿರಂತರ ಜನಸಂಪರ್ಕದಲ್ಲಿದ್ದು ಕ್ಷೇತ್ರದ ಅಭಿವೃದ್ಧಿಯೇ ನನ್ನ ಕೈಹಿಡಿಯಲಿದೆ. ಮತದಾರರು ಮತ ನೀಡಿ ಗೆಲುವು ತಂದುಕೊಡಲಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಅಲ್ಲಂ ಪ್ರಶಾಂತ್, ಬೆಟಗೇರಿ ಅಂದಾನಪ್ಪ, ಬಿ.ಸದಾಶಿವಪ್ಪ, ಹರೀಶ್‌ರೆಡ್ಡಿ, ಸುರೇಶ್‌ರೆಡ್ಡಿ, ಕೆ.ಮಲ್ಲಿಕಾರ್ಜುನ, ಭಂಗಿ ಮಲ್ಲಯ್ಯ, ವೆಂಕಟರಾಮರಾಜು, ಆರ್.ಪಿ.ಶಶಿಕುಮಾರ್, ಎಲ್.ಶ್ರೀನಿವಾಸ್ ಇತರರಿದ್ದರು.