ಕಡಬ: ಸೇಂಟ್ ಜೋಕಿಮ್ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಸ್ಥೆಯ ಸಂಚಾಲಕ ಪ್ರಕಾಶ್ ಪೌಲ್ ಡಿಸೋಜ ಉದ್ಘಾಟಿಸಿದರು.
ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಸುನೀಲ್ ಪ್ರವೀಣ್ ಪಿಂಟೋ ಶುಭ ಹಾರೈಸಿದರು. ಸೇಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಜೆಸಿಂತಾ ವೇಗಸ್, ರಕ್ಷಕ ಶಿಕ್ಷಕ ಸಂದ ಉಪಾಧ್ಯಕ್ಷ ಈಶ್ವರ್, ಸೇಂಟ್ ಜೋಕಿಮ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕಿರಣ್ ಕುಮಾರ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಶ್ರೀಲತಾ, ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ದಕ್ಷಾ ಉಪಸ್ಥಿತರಿದ್ದರು.
ಕಾಲೇಜು ವಿಭಾಗದ ಉಪನ್ಯಾಸಕಿ ಸುಜಾ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಹಿಲ್ಡಾ ರೋಡ್ರಿಗಸ್ ವಂದಿಸಿದರು. ಸೇಂಟ್ ಆನ್ಸ್ ಶಾಲಾ ಸಹಶಿಕ್ಷಕಿ ಲತಾ ನಿರೂಪಿಸಿದರು.