ಜಿಲ್ಲೆ

ಕೃಷಿಯಲ್ಲೂ ನಾವು ಲಾಭ ಪಡೆಯಬಹುದು

ಇಂದಿರಾ ಎನ್ ಕೆ

ಕೋಟ: ರೋಟರಿ ಸಮುದಾಯ ದಳ ಕೊರವಡಿ ವತಿಯಿಂದ ಎಸ್ಸೆಸ್ಸೆಲ್ಸಿ ಆಯ್ತು ಮುಂದೇನು ಎಂಬ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ಜರುಗಿತು.

ಕೃಷಿಯಲ್ಲೂ ನಾವು ಲಾಭ ಪಡೆಯಬಹುದು ಹಾಗೆ ಜೀವನವನ್ನೂ ರೂಪಿಸಿಕೊಳ್ಳಬಹುದು, ಹಲವು ಬೇರೆ ಬೇರೆ ಕೋರ್ಸ್‌ಗಳ ಬಗ್ಗೆ ಮಾಹಿತಿ ಮತ್ತು ನಿಮ್ಮ ಆಯ್ಕೆ ಹೇಗಿರಬೇಕು ಎಂಬುದರ ಬಗ್ಗೆ ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಉದ್ದೇಶಿಸಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಯಡಾಡಿ-ಮತ್ಯಾಡಿಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾಹಿತಿ ನೀಡಿದರು.

ರೋಟರಿ ಸಮುದಾಯದಳ ಕೊರವಡಿ ಅಧ್ಯಕ್ಷ ಸುರೇಶ್ ವಿಠ್ಠಲವಾಡಿ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ರೋಟರಿ ಅಧ್ಯಕ್ಷ ಸತೀಶ್ ಎಂ.ನಾಯಕ್, ಸಭಾಪತಿ ಆನಂದ್ ಆಚಾರ್ಯ ವಕ್ವಾಡಿ, ರೋಟರಿ ಕ್ಲಬ್ ಕೋಟೇಶ್ವರ ಕಾರ್ಯದರ್ಶಿ ಸುಭಾಶ್ಚಂದ್ರ ಶೆಟ್ಟಿ, ಕೊರವಡಿ ಆರ್.ಸಿ.ಸಿ. ಸ್ಥಾಪಕ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಪ್ರಭಾಕರ್ ಕುಂಭಾಶಿ ಹಾಗೂ ರೋಟರಿ ಸಮುದಾಯ ದಳದ ಸದಸ್ಯರು ಉಪಸ್ಥಿತರಿದ್ದರು.

ಡಾ.ರಮೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಮುದಾಯದಳ ಕೊರವಡಿ ಕಾರ್ಯದರ್ಶಿ ಸುದೀಪ್ ಕೋಟೇಶ್ವರ ಸನ್ಮಾನ ಪತ್ರ ವಾಚಿಸಿದರು. ಜಾನಪದ ಗಾಯಕ ಡಾ.ಗಣೇಶ್ ಗಂಗೊಳ್ಳಿ ಸ್ವಾಗತಿಸಿದರು, ಗಾಯತ್ರಿ ಹತ್ವಾರ್ ಪ್ರಾರ್ಥಿಸಿದರು. ಸಮುದಾಯ ದಳದ ಸದಸ್ಯ ಚಂದ್ರ ಇಂಬಾಳಿ ವಂದಿಸಿದರು, ಸುಪ್ರೀತಾ ಪುರಾಣಿಕ್ ನಿರೂಪಿಸಿದರು.