ಹಾವೇರಿ: ಮಹಾಮಾರಿ ಕರೊನಾ ವೈರಸ್ ಆತಂಕದ ನಡುವೆಯೂ ಇಂದಿನಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ಶಿಕ್ಷಣ ಇಲಾಖೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಿದ್ದರೂ, ಕರೊನಾ ಆರ್ಭಟಕ್ಕೆ ಹಾವೇರಿಯ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಹಾವೇರಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಓರ್ವ ವಿದ್ಯಾರ್ಥಿನಿಗೆ ಕರೊನಾ ಸೋಂಕು ತಗುಲಿದ್ದರೆ, ಇಬ್ಬರು ವಿದ್ಯಾರ್ಥಿಗಳು ಸವಣೂರು ತಾಲೂಕಿನ ಕಾರಡಗಿಯಲ್ಲಿ ಕ್ವಾರೆಂಟೈನ್ ಒಳಗಾಗಿದ್ದಾರೆ. ಹೀಗಾಗಿ ಮೂವರು ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಕರೊನಾದಿಂದ ಮೃತರ ಅಂತ್ಯಕ್ರಿಯೆಗೆ ಜಮೀರ್ ನೆರವು: 53 ಶವಸಂಸ್ಕಾರ ಮಾಡಿದ ತಂಡ
ಮೊದಲ ಯತ್ನ ಎಂದು ಪರಿಗಣಿಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ. ಆದರೆ, ಈಗಲೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಕನಸು ಭಗ್ನವಾಗಿದೆ. ಇನ್ನೂ ಹಾವೇರಿ, ಸವಣೂರು ಹಾಗೂ ಶಿಗ್ಗಾಂವಿ ಕಂಟೈನ್ಮೆಂಟ್ ಝೋನ್ನಲ್ಲಿ 25 ವಿದ್ಯಾರ್ಥಿಗಳಿದ್ದು, ಇಂದು ಪ್ರತಿಕೂಲ ವಾತಾವರಣದಲ್ಲಿಯೂ ಪರೀಕ್ಷೆ ಬರೆಯಲ್ಲಿದ್ದಾರೆ.
ಇನ್ನು ಶಿಕ್ಷಣ ಇಲಾಖೆ ಎಚ್ಚರಿಕೆ ವಹಿಸಿದ್ದು, ಕಂಟೈನ್ಮೆಂಟ್ ಝೋನ್ನಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತೇಕ ಕೊಠಡಿ ಮತ್ತು ವಾಹನದ ವ್ಯವಸ್ಥೆಯನ್ನು ಮಾಡಿದೆ. (ದಿಗ್ವಿಜಯ ನ್ಯೂಸ್) ಇದನ್ನೂ ಓದಿ: ವಿಕ್ಟೋರಿಯಾದಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ಸಿಕ್ಕಿಬಿದ್ದಿದ್ಹೇಗೆ?