ಸಿಂಧನೂರಿನ ತಹಸಿಲ್ ಕಚೇರಿಯ ಶಿರಸ್ತೇದಾರ್ ಚಂದ್ರಶೇಖರ್‌ಗೆ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ, ಅಂಬಾಭವಾನಿ ದೇವಸ್ಥಾನ ಪಂಚ ಟ್ರಸ್ಟ್ ಕಮಿಟಿ ಶುಕ್ರವಾರ ಮನವಿ ಸಲ್ಲಿಸಿತು. ಎಸ್‌ಎಸ್‌ಕೆ ಸಮಾಜದ ಚಿಂಥನಮಂಥನ ರಾಜ್ಯಾಧ್ಯಕ್ಷ ಹನುಮಂತಸಾ ನಿರಂಜನ, ರಾಘವೇಂದ್ರ ಕಬಾಡಿ, ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಮುರುಳೀಧರ ಎನ್.ಖೋಡೆ, ಉಪಾಧ್ಯಕ್ಷರಾದ ವೆಂಕಟೇಶನ ಜಿ.ಕಬಾಡಿ, ಯಲ್ಲುಸಾ ಬದಿ, ಜೈದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷ ತಾರಾಬಾಯಿ ಕಬಾಡಿ, ಸುಜಾತ ಚೌವ್ಹಾಣ ಇದ್ದರು. 
ಜಿಲ್ಲೆ

ಎಸ್‌ಎಸ್‌ಕೆ ಸಮಾಜಕ್ಕೆ ನ್ಯಾಯ ಒದಗಿಸಿ

ಸಿಂಧನೂರು: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್‌ಎಸ್‌ಕೆ) ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಲು ಒತ್ತಾಯಿಸಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ, ಅಂಬಾಭವಾನಿ ದೇವಸ್ಥಾನ ಪಂಚ ಟ್ರಸ್ಟ್ ಕಮಿಟಿ ನಗರದ ತಹಸಿಲ್ ಕಚೇರಿಯ ಶಿರಸ್ತೇದಾರ್ ಚಂದ್ರಶೇಖರ್‌ಗೆ ಶುಕ್ರವಾರ ಮನವಿ ಸಲ್ಲಿಸಿತು.

ಸಾಮಾಜಿಕ ನ್ಯಾಯದಡಿ ಎಲ್ಲರ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಿ

ಎಸ್‌ಎಸ್‌ಕೆ ಅಥವಾ ಪಟೇಗಾರ ಸಮಾಜದ ರಾಜ್ಯದಲ್ಲಿ 16 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ. ಶೇ.85 ಜನರು ಬಡದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸೋಡಾ, ಕೂಲ್ಡ್ರೀಂಕ್ಸ್, ಸಾವಜಿ ಹೋಟೆಲ್, ವಾಚ್ ರಿಪೇರಿ, ಆಟೋ ಗ್ಯಾರೇಜ್, ಟೇಲರ್, ಬೀದಿಬದಿ ವ್ಯಾಪಾರ, ಮೊಬೈಲ್ ರಿಪೇರಿ, ಗೂಡಂಗಡಿಯಲ್ಲಿ ಕಿರಾಣಿ ಅಂಗಡಿ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಸಮಾಜದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಶಕ್ತರಿದ್ದಾರೆ. ಹಾಗಾಗಿ ಸಾಮಾಜಿಕ ನ್ಯಾಯದಡಿ ಎಲ್ಲರ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಬೇಕು. ಅಲ್ಲದೆ ಪ್ರತಿ ಜಿಲ್ಲೆಯಲ್ಲಿ ಸಹಸ್ರಾರ್ಜುನ ಹೆಸರಿನಲ್ಲಿ ವೃತ್ತ ಸ್ಥಾಪನೆ ಮಾಡಬೇಕು. ಸರ್ಕಾರದಿಂದ ಸಹಸ್ರಾರ್ಜುನ ಜಯಂತಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.

ಎಸ್‌ಎಸ್‌ಕೆ ಸಮಾಜದ ಚಿಂಥನಮಂಥನ ರಾಜ್ಯಾಧ್ಯಕ್ಷ ಹನುಮಂತಸಾ ನಿರಂಜನ, ರಾಘವೇಂದ್ರ ಕಬಾಡಿ, ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಮುರುಳೀಧರ ಎನ್.ಖೋಡೆ, ಉಪಾಧ್ಯಕ್ಷರಾದ ವೆಂಕಟೇಶನ ಜಿ.ಕಬಾಡಿ, ಯಲ್ಲುಸಾ ಬದಿ, ಪ್ರಧಾನ ಕಾರ್ಯದರ್ಶಿ ಕುಬೇಂದ್ರಸಾ ಎಸ್.ಅಂಟಾಳಮರದ, ಕಾರ್ಯದರ್ಶಿ ಶ್ರೀನಿವಾಸ ಬಿ.ಬಾಕಳೆ, ಖಜಾಂಚಿ ಸದಾನಂದ ಸಾ ಕೆ.ಕಾಟ್ವಾ, ಸಹ ಖಜಾಂಚಿಗಳಾದ ಸಂತೋಷ ಎನ್.ಭಾಂಡಗೆ, ನಾಗರಾಜಸಾ ಕಾಟ್ವಾ, ಪರಶುರಾಮಸಾ ಎಚ್.ಪಾಟೀಲ್, ಗಜಾನನ ಸಾ ಆರ್.ರಾಯಬಾಗಿ, ರಘುನಾಥಸಾ ಎಸ್.ರಂಗ್ರೇಜ್, ಜೈದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷ ತಾರಾಬಾಯಿ ಕಬಾಡಿ, ಸುಜಾತ ಚೌವ್ಹಾಣ, ಶೋಭಾ ಖೋಡೆ, ರಾಜೇಶ್ವರಿ ಯಲ್ಲುಸಾಬ ಬದಿ ಇತರರಿದ್ದರು.