ಜಿಲ್ಲೆ

ಮೀಯಪದವಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ

ಸೌಮ್ಯ ಆರ್

ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆರ್ಟ್ಸ್- ಸ್ಪೋರ್ಟ್ಸ್ ಕ್ಲಬ್‌ನ 14ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ಸಮಾರಂಭ ಮೀಯಪದವು ವಿದ್ಯಾವರ್ಧಕ ಶಾಲೆಯ ರಾಮಕೃಷ್ಣ ರಾವ್ ವೇದಿಕೆಯಲ್ಲಿ ಭಾನುವಾರ ನಡೆಯಿತು.

ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಕೆ.ವಿ.ರಾಧಾಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೀಯಪದವು ವಿ.ಎ.ಯು.ಪಿ. ಶಾಲೆಯ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ., ವಾಗ್ಮಿ ಅಕ್ಷತಾ ಪ್ರದೀಪ್, ನಿವೃತ್ತ ಶಿಕ್ಷಕ ದಾಮೋದರ ಕಬ್ಬಿನಹಿತ್ತಿಲು, ಕ್ಲಬ್ ಅಧ್ಯಕ್ಷ ಕೃಷ್ಣ ಪ್ರಸನ್ನ, ಗೌರವ ಸಲಹೆಗಾರ ಜನಾರ್ದನ ಎಸ್. ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಾಧಕರಾದ ಆದ್ಯ ಎಸ್.ಎನ್., ಗಣೇಶ್ ಶರ್ಮ, ದಿಶಾ ಲಕ್ಷ್ಮೀ ಎಂ.ಬಿ., ಆದ್ಯಾಶ್ರೀ ಎಂ., ಜ್ಯೋತಿಕಾ, ಎಂ.ಸ್ತುತಿ, ಯುಕ್ತಿ ಶೆಟ್ಟಿ, ವಿ.ಮೇಘಾ, ಶ್ರೀಶ ಕೆ. ಹಾಗೂ ಪಿಯುಸಿ ಪರೀಕ್ಷೆ ಸಾಧಕರಾದ ಜಯಪ್ರದಾ, ಲಿಖಿತಾ ಎಂ.ಎಸ್., ನಂದನಾ ಪಿ.ಎಸ್., ಐಶ್ವರ್ಯಾ ಅವರನ್ನು ಗೌರವಿಸಲಾಯಿತು. ಬಳಿಕ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಘುವೀರ್ ರಾವ್ ನಿರೂಪಿಸಿದರು. ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ಕಿರಣ್ ಕುಮಾರ್ ಚಂಡಿತೋಟ ವಂದಿಸಿದರು. ಬ್ರಿಜೇಶ್ ಎಂ. ಪ್ರಾರ್ಥನೆ ಹಾಡಿದರು.