ಜಿಲ್ಲೆ

ದೇಶದ ಪರಂಪರೆ ಪರಿಚಯಿಸುವ ಶ್ರೇಷ್ಠ ಕಾರ್ಯ : ಅರಸಿನಮಕ್ಕಿಯಲ್ಲಿ ಸಂಸ್ಕಾರ ಭಾರತಿ ಅಧ್ಯಕ್ಷ ಸಂಪತ್ ಸುವರ್ಣ ಮೆಚ್ಚುಗೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ದೇಶದ ಪರಂಪರೆ ಪರಿಚಯಿಸುವ ಕಾರ್ಯ ಶ್ರೇಷ್ಠವಾದುದು ಎಂದು ಸಂಸ್ಕಾರ ಭಾರತಿಯ ತಾಲೂಕು ಅಧ್ಯಕ್ಷ ಸಂಪತ್ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಅರಸಿನಮಕ್ಕಿಯಲ್ಲಿ ನಡೆದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಪು ಉಪ್ಪರಡ್ಕ ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಧರ್ಣಪ್ಪ ಗೌಡ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉದ್ಯಮಿ ಕಿರಣ್‌ಚಂದ್ರ ಪುಷ್ಟಗಿರಿ ಶುಭಹಾರೈಸಿದರು.

ಚೈತನ್ಯಮಿತ್ರ ಸಂಘಟನೆಯ ಅಧ್ಯಕ್ಷ ಗಣೇಶ್ ಹೊಸ್ತೋಟ ಅಧ್ಯಕ್ಷತೆ ವಹಿಸಿದ್ದರು. ಯುವ ಕಲಾವಿದ ಸಂತೋಷ್ ಗೋಖಲೆ, ಪಿಯುಸಿ ಸಾಧಕಿಯರಾದ ಸುಚಿತ್ರಾ, ಸುಮಾ ಮತ್ತು ಎಸ್ಸೆಸ್ಸೆಲ್ಸಿ ಸಾಧಕ ವಿಜೇತ್ ಶೆಟ್ಟಿ ಪರವಾಗಿ ಅವರ ತಾಯಿ ಸುಂದರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುದ್ದುಕೃಷ್ಣ ವೇಷ ಪ್ರದರ್ಶಿಸಿದ ಚಿಣ್ಣರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಗ್ರಾಪಂ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್., ಪದಾಧಿಕಾರಿಗಳಾದ ಮುರಳೀಧರ ಶೆಟ್ಟಿಗಾರ್, ಅಭಿನಯ ಭಟ್, ನವೀನ್ ರೈ, ಗಣೇಶ್ ಪಲಸ್ತಡ್ಕ, ಶಿವರಾಮ ಗೌಡ, ಶ್ರೀಕಾಂತ್ ಕಾಂತ್ರೆಲ್, ಚಂದ್ರಶೇಖರ ಗೌಡ, ದಯಾನಂದ ಗೌಡ, ಶಶಿಕಾಂತ್ ಶೆಟ್ಟಿಗಾರ್, ಕೃಷ್ಣಪ್ಪ ಗೌಡ, ರವೀಂದ್ರ ಆಚಾರ್ಯ, ಹರ್ಷಾ ಕುಮಾರ್, ಸುದರ್ಶನ್ ಗೌಡ, ಜಯಪ್ರಸಾದ್ ಶೆಟ್ಟಿಗಾರ್, ಧನ್ಯಾ ಗಣೇಶ್, ನೀತಾ ರಾಧೇಶ್, ಭಾರತಿ, ಸರೋಜಿನಿ ನಾಯ್ಕ, ಧನ್ಯಾ ಶೆಟ್ಟಿಗಾರ್, ಸಂದೀಪ್, ಧನ್ಯರಾಜ್ ಮೊದಲಾದವರಿದ್ದರು. ಶಶೀಂದ್ರ ಆಚಾರ್ಯ ಸ್ವಾಗತಿಸಿದರು. ಧನಿಕ್ಷಾ ಪ್ರಾರ್ಥಿಸಿದರು. ವೃಷಾಂಕ್ ಖಾಡಿಲ್ಕರ್ ನಿರೂಪಿಸಿದರು.