ಗುರುಪುರ: ಎಡಪದವಿನ ಶ್ರೀರಾಮ ಮಂದಿರ ಟ್ರಸ್ಟ್ ವತಿಯಿಂದ 68ನೇ ವರ್ಷದ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಉತ್ಸವವು ಶನಿವಾರ ಆಕರ್ಷಕ ಟ್ಯಾಬ್ಲೋ, ಭಕ್ತಿ ರಸಮಂಜರಿ ಹಾಗೂ ಹುಲಿವೇಷ ಕುಣಿತ ಸಹಿತ ಭವ್ಯ ಶೋಭಾಯಾತ್ರೆಯೊಂದಿಗೆ ಎಡಪದವಿನಲ್ಲಿ ನಡೆಯಿತು.
ಮಂದಿರದ ಅಧ್ಯಕ್ಷ ಧನಂಜಯ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಎಡಪದವು ಗ್ರಾಪಂ ಅಧ್ಯಕ್ಷೆ ಅನಸೂಯ ಭಂಡಾರಿ, ಕಾರು ರ‌್ಯಾಲಿ ಪಟು ಅಶ್ವಿನ್ ನಾಯಕ್ ಮಿಜಾರು, ನಿವೃತ್ತ ಕ್ರೀಡಾಪಟು ಸದಾನಂದ ಸಪಲಿಗ, ಟ್ರಸ್ಟ್ ಉಪಾಧ್ಯಕ್ಷ ಗಣೇಶ್ ನಾಯಕ್, ಕಾರ್ಯದರ್ಶಿ ನಿತ್ಯಾನಂದ ಕಣ್ಣೋರಿ, ಕೋಶಾಧಿಕಾರಿ ಚಂದ್ರಕಾಂತ ನಾಯಕ್, ಜತೆ ಕಾರ್ಯದರ್ಶಿ ಹರ್ಷಿತ್, ಸಂಘಟನಾ ಕಾರ್ಯದರ್ಶಿ ಆನಂದ ದೇವಾಡಿಗ, ಸದಸ್ಯರಾದ ಉದಯ ಕುಮಾರ್ ರಾವ್, ಅರುಣ್ ದತ್ ಕುಂದೋಡಿ, ಸುಕುಮಾರ್ ಅಮೀನ್, ಗೋಪಾಲಕೃಷ್ಣ ದೇವಾಡಿಗ, ಮೋನಪ್ಪ ಅಮೀನ್, ಸುಪ್ರಿತಾ ಆರ್. ಮತ್ತಿತರರು ಇದ್ದರು.