ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ಜಯತೀರ್ಥರ ವೃಂದಾವನದ ಬಳಿ ಶ್ರೀ ಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ಸಂಪನ್ನ ಭಾನುವಾರ ಜರುಗಿತು.ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟ್ ಸಂಚಾಲಕ ಸುಳಾದಿ ಹನುಮೇಶಾಚಾರ್,ಆನೆಗೊಂದಿ ಮಠದ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ಶ್ರೀ ಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ಸಂಪನ್ನ

ರುದ್ರಪ್ಪ ವಾಲಿ

ಗಂಗಾವತಿ: ಲೂಕಿನ ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ಜಯತೀರ್ಥರ ವೃಂದಾವನದ ಬಳಿ ಶ್ರೀ ಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ಸಂಪನ್ನ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರ ಅಜ್ಞಾನುಸಾರ ಅಷ್ಟೋತ್ತರ ಮತ್ತು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಪ್ರಭಾತ, ಸಕಲ ವೃಂದಾವನಗಳಿಗೆ ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ವಿಶೇಷ ಪಂಚಾಮೃತಾಭಿಷೇಕ, ಅಷ್ಟೋತ್ತರ, ಭಜನೆ, ಹೂವಿನ ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ ಜರುಗಿತು.

ಆದೇಶ ತೆರವುಆದೇಶ ತೆರವು

ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟ್ ಸಂಚಾಲಕ ಸುಳಾದಿ ಹನುಮೇಶಾಚಾರ್ ಮಾತನಾಡಿ, ಶ್ರೀಗಳ ಆದೇಶದಂತೆ ಪ್ರತಿ ತಿಂಗಳು ಶ್ರೀಜಯತೀರ್ಥರ ಅಷ್ಟೋತ್ತರ ಹಮ್ಮಿಕೊಳ್ಳಲಾಗುತ್ತಿದ್ದು, ಅಷ್ಟೋತ್ತರ ಮತ್ತು ಪೂಜೆ ಹಕ್ಕಿನ ಕುರಿತು ಧಾರವಾಡ ಹೈಕೋರ್ಟ್ ದ್ವಿಸದಸ್ಯ ರಾಯರ ಮಠದ ಅರ್ಜಿ ಮಾನ್ಯ ಮಾಡಿ, ಮಠದ ಪರ ಆದೇಶ ನೀಡಿದೆ. ಗಡ್ಡಿಯಲ್ಲಿ ಶ್ರೀಜಯತೀರ್ಥರ ಹೆಸರಿನಲ್ಲಿ ಯಾವುದೇ ತರಹದ ಅಷ್ಟೋತ್ತರ, ಪೂಜೆ, ಆರಾಧನೆ ಮೊದಲಾದ ಧಾರ್ಮಿಕ ವಿಧಿವಿಧಾನಗಳನ್ನು ಮಾಡದಂತೆ ನಿರ್ಬಂಧ ಹೂಡಿದ ಆದೇಶ ತೆರವುಗೊಳಿಸಿದೆ ಎಂದರು.

ವಿದ್ವಾಂಸರಾದ ಗರಗ ರಾಮಾಚಾರ್, ಆನಂದಾಚಾರ್ ದಿವಾನ್, ಶಿರುಗುಪ್ಪಿ ಕಷ್ಣಾಚಾರ್, ಬೆಂಗಳೂರಿನ ಶ್ರೀನಿಧಿಆಚಾರ್ ಉಪನ್ಯಾಸ ನೀಡಿದರು. ಆನೆಗೊಂದಿ ಮಠದ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ, ಮಠಾಧಿಕಾರಿ ಸುಶಿಲೇಂದ್ರಾಚಾರ್, ಮುಖಂಡರಾದ ಬಳ್ಳಾರಿಯ ಪ್ರಸನ್ನಾಚಾರ್, ವಿಜಯಾಚಾರ್, ನರಸಿಂಹಾಚಾರ್, ಗುನ್ನಾಳ ವೆಂಕಟೇಶಾಚಾರ್, ಗೋಪಾಲಕಷ್ಣ ಹೇರೂರು, ಸುಜಯೀಂದ್ರ, ಸುಧೀಂದ್ರ ಕುಲಕರ್ಣಿ, ಗಟ್ಟು ವೆಂಕಟೇಶಾಚಾರ್, ರಂಗರಾವ್, ಧನಂಜಯಾಚಾರ್, ಹೊಸಪೇಟೆ ಪವನಾಚಾರ್ಯ, ಅನಂತ ಪದ್ಮನಾಭ ಇತರರಿದ್ದರು.

24 ಜಿವಿಟಿ 03