

ಶಹಾಬಾದ್: ಮಾಲಗತ್ತಿಯಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಪ್ರಾಚೀನ ವೀರಭದ್ರೇಶ್ವರ ಮಹಾಂಕಾಳಿ ದೇವರಿಗೆ ಭಾದ್ರಪದ ಮಾಸದ ಪ್ರಥಮ ಮಂಗಳವಾರ ವಿಶೇಷ ಅಲಂಕಾರ ನೆರವೇರಿಸಿ ಪೂಜಿಸಲಾಯಿತು.
ಸಂಪೂರ್ಣ ಮಣ್ಣಿನಲ್ಲಿ ಹುದಗಿ, ಶಿಥಿಲಗೊಂಡಿದ್ದ ದೇವಸ್ಥಾನವನ್ನು ಭಕ್ತರು ಸ್ವಚ್ಛಗೊಳಿಸಿ, ಸಂರಕ್ಷಿಸಿದ್ದರು. ಮಂಗಳವಾರ ಬೆಳಗ್ಗೆ ಋತ್ವಿಜರಾದ ವೆಂಕಟೇಶ ಜೋಶಿ, ನಿಖಿಲ್ ಜೋಶಿ ಅವರು ಲಘುನ್ಯಾಸ ಪೂರ್ವಕ ರುದ್ರಾಭಿಷೇಕ, ಅಲಂಕಾರ ನಡೆಸಿ, ಮಹಾಮಂಗಳಾರತಿ ಮಾಡಿದರು.
ಗ್ರಾಪಂ ಅಧ್ಯಕ್ಷ ಸದಾನಂದ, ಪ್ರಮುಖರಾದ ಕಲ್ಲಮ್ಮ ಆಯಿ, ಮಲ್ಲಣ್ಣ ಅಲ್ಲೂರ, ಮರಲಿಂಗ ತಳವಾರ, ಮಲ್ಲಿಕಾರ್ಜುನ ಇಟಗಿ, ದೇವಣ್ಣ ಪಡಶೆಟ್ಟಿ, ದೇವೆಂದ್ರ ಸಾಲೊಳ್ಳಿ, ವಿಜಯಕುಮಾರ, ಚಂದ್ರಶೇಖರ ರಾವೂರ, ಹೀರಾಚಂದ ಗುಗ್ಗುರಿ, ಮರಪ್ಪ ಮೂಲಿಮನಿ, ದ್ಯಾವಪ್ಪ ಅಲ್ಲೂರ, ಸಾಯಿ ಸಾಹು ಸಾಲೊಳ್ಳಿ, ಸಿದ್ದು ಯಾದಗಿರಿ, ಶಿವಣ್ಣಗೌಡ ಪಾಟೀಲ್, ಬಾಲಕೃಷ್ಣ ಜೋಶಿ, ಲಕ್ಷ್ಮೀಕಾಂತ ಜೋಶಿ ಇತರರಿದ್ದರು.