ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮುಡಿಪು ಶ್ರೀ ಭಾರತೀ ಶಾಲೆ ಅಮೃತ ಮಹೋತ್ಸವ ಸರಣಿ ಕಾರ್ಯಕ್ರಮ ಭಾನುವಾರ ಸ್ನೇಹ ಮಿಲನ, ಕೃತಜ್ಞತಾಮೃತ ಹಾಗೂ ಅಮೃತ ಭಾರತೀ ಸ್ಮರಣ ಸಂಚಿಕೆ ಲೋಕಾರ್ಪಣೆಯೊಂದಿಗೆ ಸಮಾಪನಗೊಂಡಿತು.
ಸ್ನೇಹ ಮಿಲನ ಪ್ರಯುಕ್ತ ನಡೆದ ಅನೌಪಚಾರಿ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವದ ‘ಅಮೃತ ಭಾರತೀ’ ಸ್ಮರಣ ಸಂಚಿಕೆಯ ಅಂತಿಮ ಪ್ರತಿಗಳನ್ನು ಅನಾವರಣಗೊಳಿಸಲಾಯಿತು. ಅಮೃತ ಮಹೋತ್ಸವಕ್ಕೆ ಶ್ರಮಿಸಿದ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಬೋಧಕೇತರ ವೃಂದ, ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಶಾಲೆಯ ಏಳನೇ ಹಾಗೂ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಯ ನಿವೃತ್ತ ಶಿಕ್ಷಕಿ ಲೀಲಾ ನೀಡಿದ ನಗದು ಪುರಸ್ಕಾರ ದತ್ತಿನಿಧಿಯ ದಾಖಲೆ ಶಾಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
‘ಆಟಿದ ನೆಂಪು, ಸೋಣದ ಕಂಪು’ ಹೆಸರಿನಲ್ಲಿ ತುಳುನಾಡಿನ ವಿಶಿಷ್ಟ ತಿನಿಸುಗಳನ್ನು ಉಣಬಡಿಸಲಾಯಿತು. ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಸ್ಗರ್, ಮುಖ್ಯಶಿಕ್ಷಕ ರಾಮಕೃಷ್ಣ ಭಟ್, ಶಕುಂತಲಾ ಶೆಟ್ಟಿ, ಶ್ವೇತಾ ಬಲ್ಲಾಳ್, ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಚಂದ್ರಹಾಸ ಕಣಂತೂರು, ಮುದ್ರಕ ನಾಗೇಶ್ ಕಲ್ಲೂರು, ಹಿರಿಯ ವಿದ್ಯಾರ್ಥಿಗಳಾದ ಜಗದೀಶ ಅಡಪ ಕಡ್ವಾಯಿ, ರಾಧಾಕೃಷ್ಣ ರೈ ಉಮಿಯ, ಪ್ರಶಾಂತ ಕಾಜವ, ಅಶ್ರಫ್ ಕುರ್ನಾಡು, ನವೀನ್ ಡಿಸೋಜ, ಪಿ.ನಾರಾಯಣ ಭಟ್, ಹಿರಿಯ ಶಿಕ್ಷಕ ರಾಮ ರಾವ್, ವಿಜಯಲಕ್ಷ್ಮೀ, ಹರೀಶ್, ಪ್ರಮುಖರಾದ ಉದ್ಯಮಿ ರಮೇಶ ಶೇಣವ, ಮೈಸೂರು ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಪ್ರಮುಖರಾದ ಅಬೂಬಕ್ಕರ್ ಹೂಹಾಕುವ ಕಲ್ಲು, ಜಿ.ರಾಮಕೃಷ್ಣ ಭಟ್, ವಿಜಯಕುಮಾರಿ ಮತ್ತಿತರರಿದ್ದರು. ಜಯಂತಿ ಶೇಟ್ ಪ್ರಾರ್ಥಿಸಿದರು. ಡಾ.ಮಂಜುಳಾ ಶೆಟ್ಟಿ ನಿರೂಪಿಸಿದರು.
ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಅವಧಿಗೆ ಅಧ್ಯಕ್ಷರಾಗಿ ನಿಶ್ಚಲ್ ಡಿ.ಶೆಟ್ಟಿ ಪುನರಾಯ್ಕೆಯಾದರು. ಗೌರವಾಧ್ಯಕ್ಷರಾಗಿ ಜಗದೀಶ್ ಅಡಪ ಕಡ್ವಾಯಿ, ಉಪಾಧ್ಯಕ್ಷರಾಗಿ ನರಸಿಂಹ ಭಟ್ ಎನ್., ರಶ್ಮಿ ಅಮ್ಮೆಂಬಳ, ಮಜೀದ್ ಮದ್ದನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಭಟ್, ಜತೆ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮೀ, ಕೋಶಾಧಿಕಾರಿಯಾಗಿ ಮನು ವೆಂಕಟೇಶ್, ಗೌರವ ಸಲಹೆಗಾರರಾಗಿ ಉಮೇಶ್ ಕೆ.ಆರ್. ಹಾಗೂ ಸುಬ್ರಹ್ಮಣ್ಯ ಭಟ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಮ್ಮದ್ ಅಸ್ಗರ್ ಆಯ್ಕೆಯಾದರು.