ಜಿಲ್ಲೆ

ಬುದ್ಧಿ ಶಕ್ತಿ ಹೆಚ್ಚಿಸಲು ಕ್ರೀಡೆ ಸಹಕಾರಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕ್ರೀಡಾಕೂಟ ದೈಹಿಕ, ಮಾನಸಿಕವಾಗಿ ಪ್ರಯೋಜನಕಾರಿಯಾದರೆ ಚೆಸ್ ಆಟ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಲು ಸಹಕಾರಿ. ಗ್ರಾಮೀಣ ಮಟ್ಟದಲ್ಲಿ ಈ ಸ್ಪರ್ಧೆಗೆ ಅವಕಾಶ ನೀಡಿರುವುದು ನಿಜಕ್ಕೂ ಪ್ರಶಂಸನೀಯ. ಅದಾನಿ ಕಂಪನಿಯು ಸಾಮಾಜಿಕ, ಶೈಕ್ಷಣಿಕ ಸೇವೆಯೊಂದಿಗೆ ಕ್ರೀಡೆಗೂ ವಿಶೇಷ ಒತ್ತು ನೀಡುತ್ತಿದೆ ಎಂದು ಅದಾನಿ ಗ್ರೂಪ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಕಾಪು ಉಡುಪಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ವತಿಯಿಂದ ಎಐಸಿಎಫ್ ದೆಹಲಿಯ, ಬೆಂಗಳೂರಿನ ಕೆಎಸ್‌ಸಿಎ, ಉಡುಪಿಯ ಯುಡಿಸಿಎ ಅನುಮತಿ ಮೇರೆಗೆ ಕಾಪುವಿನ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ 3 ದಿನಗಳ ಕಾಲ ಪ್ರಥಮ ಬಾರಿಗೆ ನಡೆಯುವ ಕರ್ನಾಟಕ ರಾಜ್ಯಮಟ್ಟದ ಅಂಡರ್ 15 ಮುಕ್ತ ಗರ್ಲ್ಸ್ ಫೀಡೆರೇಟೆಡ್ ಚೆಸ್ ಚಾಂಪಿಯನ್‌ಷಿಪ್-2025ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಮಧುಕರ್ ಮಾತನಾಡಿ, ರಾಷ್ಟ್ರದಲ್ಲಿ ಚೆಸ್‌ನಲ್ಲಿ 8 ಸಾವಿರ ಕ್ರೀಡಾಳುಗಳಿದ್ದು, 3ನೇ ಸ್ಥಾನದಲ್ಲಿದೆ. ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗ್ರಾೃಂಡ್ ಮಾಸ್ಟರ್ ವತಿಯಿಂದ ಉಚಿತ ತರಬೇತಿ ನೀಡುತ್ತೇವೆ ಎಂದರು.

ದಂಡತೀರ್ಥ ಪ್ರತಿಷ್ಠಾನ ಅಧ್ಯಕ್ಷ ಸೀತಾರಾಮ ಭಟ್ ಚೆಸ್ ಸ್ಪರ್ಧೆಗೆ ಚಾಲನೆ ನೀಡಿದರು. ಆಸರೆ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪೆನ್‌ವಿಲ್ ಸೋನ್ಸ್, ಉಡುಪಿಯ ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ವ್ಯಾಸರಾಜ್ ತಂತ್ರಿ, ಆಸ್ಪೆನ್ ಇನ್ಫ್ರಾ ಪಡುಬಿದ್ರಿ ಪ್ರೈವೇಟ್ ಎಸ್‌ಇಝಡ್ ಮುಖ್ಯಸ್ಥ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ರಮೇಶ್ ಕೋಟೆ ಎ, ಸಾಮ್ರಾಟ್ ಚೆಸ್ ಯುನಿಟ್ ಕಾರ್ಯದರ್ಶಿ ನಾಗೇಶ್ ಕಾರಂತ್, ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರರಾದ ಶ್ರೀಧರ್ ಶೆಣೈ, ನಾಗೇಶ ಕಾರಂತ್ ಪಾಂಗಾಳ ಉಪಸ್ಥಿತರಿದ್ದರು. ಸಂಸ್ಥೆಯ ಸ್ಥಾಪಕ ಸಾಕ್ಷಾತ್ ಯು.ಕೆ.ಕಾಪು ಸ್ವಾಗತಿಸಿದರು. ಶ್ರೀ ನಾರಾಯಣಗುರು ಸ್ಪೋರ್ಟ್ಸ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮನಾಥ್ ಕಾಪು ವಂದಿಸಿದರು. ಫಿಡೇ ಆರ್ಬಿಟರ್, ಕೋಚ್ ನಿರ್ದೇಶಕಿ ಸೌಂದರ್ಯ ಯು.ಕೆ.ಕಾರ್ಯಕ್ರಮ ನಿರೂಪಿಸಿದರು.

ಮೂರು ದಿನಗಳ ಕಾಲ ಸ್ಪರ್ಧೆ ಆಯೋಜನೆ

3 ವರ್ಷದಿಂದ 15 ವರ್ಷದೊಳಗಿನ ಬಾಲಕ, ಬಾಲಕಿಯರ ವಯೋಮಿತಿ 15 ಬಾಲಕ, ಬಾಲಕಿಯರ ಚೆಸ್ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 325 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಓಪನ್, ಹುಡುಗಿಯರ ವಿಭಾಗದಲ್ಲಿ ಒಟ್ಟು 4 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೂರು ದಿನಗಳ ಕಾಲ ಸ್ಪರ್ಧೆ ನಡೆಯಲಿದೆ.