ಕಾಸರಗೋಡು: ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಚಾಲಕ ಹುದ್ದೆಗೆ (ನೇರ ನೇಮಕಾತಿ ಮತ್ತು ಎನ್‌ಸಿಎ) ಕಿರುಪಟ್ಟಿಯಲ್ಲಿ ಒಳಗೊಂಡ ಉದ್ಯೋಗಾರ್ಥಿಗಳ ದೈಹಿಕ ಕ್ಷಮತೆ ಮತ್ತು ಕ್ರೀಡಾ ಸಾಮರ್ಥ್ಯ ಪರೀಕ್ಷೆ ಅ.17ರಂದು ಕಾಸರಗೋಡು ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಮುಂಚಿತವಾಗಿ ಪ್ರೊಫೈಲ್‌ನಿಂದ ಡೌನ್‌ಲೋಡ್ ಮಾಡಿದ ಪ್ರವೇಶ ಟಿಕೆಟ್, ಮೂಲ ಗುರುತಿನ ದಾಖಲೆ, ಸಹಾಯಕ ಶಸ್ತ್ರಚಿಕಿತ್ಸಕ ಯಾ ಜೂನಿಯರ್ ಕನ್ಸಲ್ಟೆಂಟ್ ಶ್ರೇಣಿಗಿಂತ ಕಡಿಮೆಯಿಲ್ಲದ ವೈದ್ಯಕೀಯ ಅಧಿಕಾರಿಯಿಂದ ಪಡೆದ ವೈದ್ಯಕೀಯ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿಯೊಂದಿಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.