ಮಂಗಳೂರು: ರಮಾಶಕ್ತಿ ಮಿಷನ್ ಶಾಖೆಗಳಲ್ಲಿ ಒಂದಾಗಿರುವ ಬೆಂಗಳೂರು ಮಲ್ಲೇಶ್ವರದಲ್ಲಿರುವ ಶ್ರೀ ರಮಾ ದೇವಿ ಭಕ್ತ ಮಂಡಳಿ, ಶ್ರೀ ರಮಾದೇವಿ ಮಂದಿರ ಸ್ಥಾಪನೆಯಾದ 50ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.
ಈ ಪ್ರಯುಕ್ತ ಶಕ್ತಿನಗರದಲ್ಲಿರುವ ರಮಾ ಶಕ್ತಿ ಮಿಷನ್ ಕೇಂದ್ರದಲ್ಲಿ ಡಿ.6ರಿಂದ 8ರವರೆಗೆ ಆಧ್ಯಾತ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ. ಧ್ಯಾನ, ಭಜನೆ, ಆಧ್ಯಾತ್ಮಿಕ ಉಪನ್ಯಾಸ, ಶಾಸ್ತ್ರೀಯ ಸಂಗೀತ, ಹರಿಕಥೆ ಇತ್ಯಾದಿ ವೈವಿಧ್ಯಮಯ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿವೆ.
6ರಂದು ಬೆಳಗ್ಗೆ 10 ಗಂಟೆಗೆ ಮಿಷನ್ ಅಧ್ಯಕ್ಷ ಉದಯ ಡಿ.ಭಟ್ಕಳ್ ಶಿಬಿರ ಉದ್ಘಾಟಿಸಿ ಸುವರ್ಣ ಮಹೋತ್ಸವ ಭಾಷಣ ಮಾಡಲಿದ್ದಾರೆ. ಬೆಂಗಳೂರು ರಮಾದೇವಿ ಮಂದಿರ ಕುರಿತ ಸಾಕ್ಷೃಚಿತ್ರ(ದಿ ಅಬೋಡ್ ಆಫ್ ಬ್ಲಿಸ್) ಪ್ರದರ್ಶನ, ಬೆಂಗಳೂರು ಮಂಡಳಿ ಸದಸ್ಯರಿಂದ ವಿಶೇಷ ಭಜನೆ, ಸತ್ಸಂಗಗಳು ಜರುಗಲಿದೆ.
7ರಂದು ಸಂಜೆ ಗಂಟೆ 4.30ಕ್ಕೆ ಬೆಂಗಳೂರಿನ ಪಂಡಿತ್ ಕೆ.ವಿ.ನಂದಕುಮಾರ್ ಅವರ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ನೆರವೇರಲಿದೆ. ಪಂಡಿತ್ ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂ ಹಾಗೂ ಪಂಡಿತ್ ವಿಶ್ವನಾಥ್ ನಾಕೋಡ್ ತಬ್ಲಾ ಸಾಥ್ ನೀಡಲಿದ್ದಾರೆ. 8ರಂದು ಬೆಳಗ್ಗೆ 9ರಿಂದ ಭಜನೆ, ಬಳಿಕ ಮಾತೆಯವರ ದಿವ್ಯ ಸ್ಮತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ಕ್ಕೆ ಡಾ.ಎಸ್.ಪಿ.ಗುರುದಾಸ್ ಅವರಿಂದ ಹರಿಕಥೆ(ಕರುಣಾ ಸಿಂಧು) ಇದೆ. ಸಂಜೆ ಗಂಟೆ 6ಕ್ಕೆ ಸಮಾರೋಪ ಎಂದು ರಮಾದೇವಿ ಭಕ್ತ ಮಂಡಳಿ ಕಾರ್ಯದರ್ಶಿ ನಿಮಾಯಿ ನಗರ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.