ಜಿಲ್ಲೆ

ಬಾಕಿ ಉಳಿದ ಅರ್ಜಿಗಳ ಶೀಘ್ರ ವಿಲೇವಾರಿ

ಇಂದಿರಾ ಎನ್ ಕೆ

ಬ್ರಹ್ಮಾವರ: ಕುಮ್ಕಿ ಹೆಸರಿನಲ್ಲಿರುವ ಅರ್ಜಿಗಳ ಕುರಿತು ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ಅನೇಕ ಅರ್ಜಿಗಳು ಬಾಕಿ ಇವೆ. ಕರಾವಳಿ ಜಿಲ್ಲೆಗಳಲ್ಲಿ ತುಂಡು ಭೂಮಿಗಳೇ ಹೆಚ್ಚು ಇರುವ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದು ಬಾಕಿ ಅರ್ಜಿಗಳನ್ನು ವಿತರಿಸಲಾಗುವುದು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ತಾಲೂಕು ಹಾಗೂ ಹೋಬಳಿಯ ಪ್ರಥಮ ಬಗರ್ ಹುಕುಂ ಸಮಿತಿ ಸಭೆಯಲ್ಲಿ 94ಸಿ ಮತ್ತು 94ಸಿ ಸಿ ಅರ್ಜಿದಾರರಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

ನಾಲ್ಕೂರು ಗ್ರಾಮದ ವನಜಾ ಕೊಠಾರಿ, ಚೇರ್ಕಾಡಿ ಗ್ರಾಮದ ಪಿಯುಸ್ ಡಿಅಲ್ಮೆಡಾ, ಉಪ್ಪೂರು ಗ್ರಾಮದ ದಾಮೋದರ ನಾಯ್ಕ, ವಾರಂಬಳ್ಳಿ ಗ್ರಾಮದ ಎಸ್.ಗೋಪಾಲ್, ಬೈಕಾಡಿ ಗ್ರಾಮದ ಸಂಕಿ ಪುತ್ರನ್ ಅವರಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು.

ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ, ಸದಸ್ಯರಾದ ಸಂಜೀವ ಸಾಲ್ಯಾನ್, ಕಂದಾಯ ನಿರೀಕ್ಷಕ ರಾಜು, ಉಪತಸೀಲ್ದಾರ್ ಹರ್ಷಕುಮಾರ್, ಲೋಕೇಶ್, ಅಧಿಕಾರಿಗಳು ಇದ್ದರು.