ವಿಜಯವಾಣಿ ಸುದ್ದಿಜಾಲ ಹೆಬ್ರಿ
ವಿದ್ಯಾರ್ಥಿಗಳ ಕೌಶಲ ವರ್ಧನೆಯೊಂದಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಅವರ ಸ್ಪರ್ಧಾ ಸಾಮರ್ಥ್ಯ ಉನ್ನತೀಕರಿಸುವ ಸಲುವಾಗಿ ಆಯೋಜಿಸಿದ ಒಂದು ತಿಂಗಳ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಹೇಳಿದರು.
ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ, ಉದ್ಯೋಗ ಮಾಹಿತಿ ಘಟಕ, ಮತ್ತು ಪ್ರೇರಣಾ ಘಟಕಗಳು ಉನ್ನತಿ ಯುನೆಕ್ಟ್ಸ್ ಸಹಯೋಗದೊಂದಿಗೆ ಹಮ್ಮಿಕೊಂಡ ‘ಉನ್ನತಿ ಔದ್ಯೋಗಿಕ-ಜೀವನ ಕೌಶಲ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಉನ್ನತಿ ಯುನೆಕ್ಟ್ಸ್ ಫೌಂಡೇಶನ್‌ನ ತರಬೇತುದಾರ ಗುರುಪ್ರಸಾದ್ ಭಟ್ ಮಾತನಾಡಿದರು. ಉನ್ನತಿ ಮತ್ತು ಉದ್ಯೋಗ ಮಾಹಿತಿ ಘಟಕದ ಸಂಚಾಲಕಿ ಅಪರ್ಣಾ ಕೆ.ಯು. ಸ್ವಾಗತಿಸಿದರು. ಪ್ರೇರಣಾ ಸಂಚಾಲಕಿ ಮೀನಾಕ್ಷಿ ನಾಯ್ಕ ವಂದಿಸಿದರು.