ಆಳ್ವಾಸ್ ರೋಸ್ಟ್ರಮ್- ಸ್ಪೀಕರ್ಸ್‌ ಕ್ಲಬ್‌ನಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪುರಸ್ಕೃತೆ ಸೀತವ್ವ ದುಂಡಪ್ಪ ಜೋಡಟ್ಟಿ ಅವರನ್ನು ಡಾ. ಕುರಿಯನ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು. 
ಜಿಲ್ಲೆ

ಸ್ವಾರ್ಥವೇ ಸಾಮಾಜಿಕ ಪಿಡುಗಿಗೆ ಮೂಲ

Santhosh Krishna K M

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಸಾಮಾಜಿಕ ಪಿಡುಗುಗಳಿಗೆ ಮೂಲ ಕಾರಣ ಮನುಷ್ಯನ ಸ್ವಾರ್ಥ. ಸಾಮಾಜಿಕ ಪಿಡುಗುಗಳು ನಗರ ಪ್ರದೇಶಕ್ಕೆ ಹೋಲಿಸಿದರೆ, ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಬಾಲ್ಯ ವಿವಾಹ ಮಹಿಳೆಗೆ ಮಾತ್ರವಲ್ಲದೆ ಸಮಾಜಕ್ಕೂ ಶಾಪ ಎಂದು ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪುರಸ್ಕೃತೆ ಸೀತವ್ವ ದುಂಡಪ್ಪ ಜೋಡಟ್ಟಿ ವಿಶ್ಲೇಷಿಸಿದರು.

ಆಳ್ವಾಸ್ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ರೋಸ್ಟ್ರಮ್- ಸ್ಪೀಕರ್ಸ್‌ ಕ್ಲಬ್ ಆಯೋಜಿಸಿದ್ದ ‘ಮಹಿಳೆಯರು, ಮಕ್ಕಳು ಹಾಗೂ ಸಾಮಾಜಿಕ ಸಮಸ್ಯೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ದೇವದಾಸಿ ಪದ್ಧತಿ ನಮ್ಮ ದೇಶದಲ್ಲಿ ಇಂದಿಗೂ ಚಲಾವಣೆಯಲ್ಲಿರುವುದು ಅಘಾತಕಾರಿ ಎಂದರು. ವಿದ್ಯಾರ್ಥಿನಿ ಅಂಕಿತಾ ಪರಾಡ್ಕರ್ ಕಾರ್ಯಕ್ರಮ ನಿರೂಪಿಸಿದರು.