ಜಿಲ್ಲೆ

ದೇವಳ ಜೀರ್ಣೋದ್ಧಾರಕ್ಕೆ ವಿಶೇಷ ಅನುದಾನ

ಇಂದಿರಾ ಎನ್ ಕೆ

ಹೆಬ್ರಿ: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ವಾಸ್ತುವಿಗೆ ಧಕ್ಕೆ ಬಾರದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಪಟ್ಟವರೊಡನೆ ಚರ್ಚಿಸಲಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಕೊಡಿಸುವ ಪ್ರಯತ್ನ ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಮಾಹೆ ಸಹಕುಲಾಧಿಪತಿ ಎಚ್.ಎಸ್.ಬಲ್ಲಾಳ್ ಮಾತನಾಡಿದರು. ಊರಿನ ಪ್ರಮುಖ ಕೆ.ಶಾಂತಾರಾಮ್ ಸೂಡ, ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ವಿಠ್ಠಲ್ ತಂತ್ರಿ, ಕುಮಾರಗುರು ತಂತ್ರಿ, ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಸದಸ್ಯರಾದ ಪಿ.ಕೃಷ್ಣ ಅಡಿಗ, ರಾಮ ಕುಲಾಲ್ ಪಕ್ಕಾಲ್, ದಿನೇಶ್ ಪೂಜಾರಿ ಗರಡಿಮನೆ, ರಂಜಿತ್ ಪ್ರಭು ಬುಕ್ಕಿಗುಡ್ಡೆ, ಸಂತೆಕಟ್ಟೆ, ರಾಮದಾಸ ಶಾಂತಾ ಆರ್.ಶೆಟ್ಟಿ ವಡ್ಡಮೇಶ್ವರ, ಲಲಿತಾಂಬಾ ಎ.ಗೌಡ ಜೋಗಿಬೆಟ್ಟು, ಗೌರವ ಕಾನೂನು ಸಲಹೆಗಾರ ವಿಶ್ವಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಗೌರವ ಸಲಹೆಗಾರ ಸಂತೋಷ ಕುಲಾಲ್ ಪಕ್ಕಾಲು ಸ್ವಾಗತಿಸಿದರು. ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ರಾಜಕುಮಾರ್ ಶೆಟ್ಟಿ ದೊಡ್ಡನೆ ವಂದಿಸಿದರು.