ಗಂಗೊಳ್ಳಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಅನೇಕ ಕಾರ್ಯಕ್ರಮ ಮಾಡಬಹುದು. ಗ್ರಾಪಂ ವ್ಯಾಪ್ತಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಕಾಮಗಾರಿಗಳಲ್ಲಾದ ಲೋಪದೋಷ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರ ಅಹವಾಲು ಆಲಿಸಲು ವಿಶೇಷ ಗ್ರಾಮಸಭೆ ಸಹಕಾರಿಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಮಧುಕರ ಹೇಳಿದರು.
ಗಂಗೊಳ್ಳಿ ಗ್ರಾಪಂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ 2024-25ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಅಮೂಲ್ಯ ಸಾಕ್ಷರತಾ ಕೇಂದ್ರ ಆಶಾಲತಾ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡಿದರು. ಗಂಗೊಳ್ಳಿ ಗ್ರಾಪಂ ಆಡಳಿತಾಧಿಕಾರಿ ಶಶಿಕಲಾ, ಪಿಡಿಒ ಉಮಾಶಂಕರ, ಗ್ರಾಪಂ ಲೆಕ್ಕಸಹಾಯಕ ಶೇಖರ ಜಿ., ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುರೇಂದ್ರ, ತಾಂತ್ರಿಕ ಸಹಾಯಕ ದೀಕ್ಷಿತ್, ಬಿಇಟಿ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು. ನಾರಾಯಣ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು.