ಅಳವಂಡಿ ಸಮೀಪದ ಬೋಚನಹಳ್ಳಿಯಲ್ಲಿ ಆಯೋಜಿಸಿದ್ದ ಬೀದಿ ನಾಟಕದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಮಾತನಾಡಿದರು. ಸಮುದಾಯ ಆರೋಗ್ಯಾಧಿಕಾರಿ ರಕ್ಷಿತಾ, ಆಶಾ ಕಾರ್ಯಕರ್ತೆಯರಾದ ಯಲ್ಲಮ್ಮ, ಹುಲಿಗೆಮ್ಮ, ಕಲಾವಿದರಾದ ವೀರೇಶ, ಸಿದ್ದಲಿಂಗಯ್ಯ, ಗ್ಯಾನೇಶ, ದಾವಲಸಾಬ್ ಇದ್ದರು. 
ಜಿಲ್ಲೆ

ಗರ್ಭಿಣಿ, ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ

ಅಳವಂಡಿ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಸದ್ಬಳಕೆ ಮಾಡಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಹೇಳಿದರು.


ಸಮೀಪದ ಬೋಚನಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಸೇವೆಗಳ ಕುರಿತು ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ 12 ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಿಣಿ, ತಾಯಿ, ಮಗು, ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.


ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ದೊರೆಯುವ ಸೇವೆಗಳ ಕುರಿತು ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.

ಸಮುದಾಯ ಆರೋಗ್ಯಾಧಿಕಾರಿ ರಕ್ಷಿತಾ, ಆಶಾ ಕಾರ್ಯಕರ್ತೆಯರಾದ ಯಲ್ಲವ್ವ, ಹುಲಿಗೆವ್ವ, ಕಲಾವಿದರಾದ ವೀರೇಶ ಹಾಲಗುಂದಿ, ಸಿದ್ದಲಿಂಗಯ್ಯ, ಸಿದ್ದಲಿಂಗಮ್ಮ ಹಾಲಗುಂದಿ, ಶಿವಲಿಂಗಮ್ಮ, ದಾವಲಸಾಬ್, ಗ್ಯಾನೇಶ, ಶರಣಪ್ಪ ಇದ್ದರು.