ಬ್ರಹ್ಮಾವರ: ಪಹಲ್ಗಾಮ್ ದಾಳಿಯಲ್ಲಿ ನಂತರ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನದ ಸೇನಾ ನೆಲೆಯನ್ನು ಧ್ವಂಸಗೊಳಿಸಿ, ಭಾರತದ ಗೆಲುವಲ್ಲಿ ಶ್ರಮಿಸಿದ ಬ್ರಹ್ಮಾವರ ಬಳಿಯ ಮಟಪಾಡಿಯ ಕುದ್ರುವಿನ ಚರಣ್ ಪೂಜಾರಿ ಗುರುವಾರ ಹುಟ್ಟೂರ ಮನೆಗೆ ಆಗಮಿಸಿದ್ದರು.
ಆಗಮಿಸುತ್ತಿದ್ದಂತೆ ಊರ ಜನತೆ, ಮನೆ ಮಂದಿಗೆ ಸಂಭ್ರಮದ ವಾತಾವರಣ. ಬೋಜ ಪೂಜಾರಿ ಮತ್ತು ಸರೋಜ ಅವರ ಮಗ ಚರಣ್ ಪೂಜಾರಿ 5 ವರ್ಷದ ಹಿಂದೆ ಸೇನೆ ಸೇರಿದ್ದು, ಇಂದು ಮನೆಗೆ ಬರಮಾಡಿಕೊಂಡರು.
ಇಲ್ಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ತಂಡ ಡೀಸೆಂಟ್ ಫ್ರೆಂಡ್ಸ್‌ನ ಸದಸ್ಯರು ಸೇರಿ ಯೋಧ ಚರಣ್ ಅವರಿಗೆ ಆಪರೇಶನ್ ಸಿಂಧೂರ ವಿಜಯದ ಮಾಲೆ ಹಾಕಿ ಗೌರವಿಸಿದರು.