ವಿಜಯವಾಣಿ ಸುದ್ದಿಜಾಲ ಕಡಬ
ಯುವ ಜನತೆಯ ಶಕ್ತಿ ಸಮಾಜಕ್ಕೆ ತೀರಾ ಅಗತ್ಯ ಇದೆ, ತನ್ಮೂಲಕ ಊರಿನ ಅಭಿವೃದ್ಧಿಗೆ ಸಹಭಾಗಿತ್ವ ನೀಡಬೇಕು, ಸಮಾಜಮುಖಿ ಸೇವೆಯ ಮೂಲಕ ಯುವಕರು ಮಾದರಿ ಆಗಬೇಕು ಎಂದು ಆತೂರು ಬದ್ರಿಯಾ ಜುಮಾ ಮಸೀದಿ ಮುದರ‌್ರಿಸ್ ಸೆಯ್ಯದ್ ಜುನೈದ್ ಜಿಫ್ರಿ ತಂಙಳ್ ಹೇಳಿದರು.
ಗಂಡಿಬಾಗಿಲು ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಳ್ಳಲಾದ ಬುರ್ದಾ, ಖವಾಲಿ ಮಜ್ಲಿಸ್ ಮತ್ತು ಸಾಧಕರಿಗೆ ಸನ್ಮಾನ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಗಂಡಿಬಾಗಿಲು ಜುಮಾ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಸೌಕತ್ ಫೈಝಿ ಮಾತನಾಡಿದರು. ಗಂಡಿಬಾಗಿಲು ಪರಿಸರದ ಪ್ರತಿಭೆಗಳಾದ ಮಸೂದ್ ಸಹದಿ, ಶಹೀರ್, ಮುಸ್ತಕ್ ಮತ್ತು ಸಂಗಡಿಗರಿಂದ ಬುರ್ದಾ ಆಲಾಪಣೆ ಮತ್ತು ಖವಾಲಿ ಕಾರ‌್ಯಕ್ರಮ ನಡೆಯಿತು.
ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಗಂಡಿಬಾಗಿಲು ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ, ಬದ್ರುದ್ದೀನ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್, ಬುರ್ದಾ ಮಜ್ಲಿಸ್ ಸಮಿತಿ ಚೆಯರ್‌ಮೆನ್ ಜಿ.ಮಹಮ್ಮದ್ ರಫೀಕ್, ಸಂಚಾಲಕ ಇಸಾಕ್ ಬೊಳುಂಬುಡ, ಮಸೀದಿ ಕಾರ್ಯದರ್ಶಿ ನಝೀರ್ ಪೂರಿಂಗ, ಕೋಶಾಧಿಕಾರಿ ಹಸೈನಾರ್ ಹಾಜಿ, ನೀರಾಜೆ ಮದ್ರಸದ ಅಧ್ಯಕ್ಷ ಎನ್.ಸಿದ್ದಿಕ್, ಸದರ್ ಮುಅಲ್ಲಿಂ ಹಾರಿಸ್ ಅಝ್‌ಹರಿ, ಕೆಮ್ಮಾರ ಮದ್ರಸದ ಕೆ.ಕಮಾಲ್, ಕೆಮ್ಮಾರ ಮಸೀದಿ ಅಧ್ಯಕ್ಷ ರಶೀದ್ ಹಾಜಿ ಬಡ್ಡಮೆ, ಬಿ.ಕೆ.ಮಹಮ್ಮದ್ ಹಾಜಿ ಕುಂಡಾಜೆ, ನಝೀರ್ ಎನ್.ಕೆ., ಬಶೀರ್ ಷಾ, ನೌಫಲ್ ಕೊಯಿಲ, ಸಿ.ಎಚ್. ಸಿದ್ದಿಕ್, ಯಂಗ್‌ಮೆನ್ಸ್ ಪದಾಧಿಕಾರಿಗಳಾದ ಎಸ್.ಪಿ.ಖಲಂದರ್, ನಿಝಾರ್, ಮಹಮ್ಮದ್ ಆಲಿ, ಪಿ.ಸಿದ್ದಿಕ್, ಶಾಕಿರ್ ಉಪಸ್ಥಿತರಿದ್ದರು.
ಯಂಗ್‌ಮೆನ್ಸ್ ಅಧ್ಯಕ್ಷ ಪಿ.ಲತೀಫ್ ಸ್ವಾಗತಿಸಿ, ಕಾರ‌್ಯದರ್ಶಿ ಝಿಯಾದ್ ವಂದಿಸಿದರು. ರಫೀಕ್ ಗೋಳಿತ್ತಡಿ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಲೋತ್ಸವ ಕಾರ್ಯಕ್ರಮದ ಕನ್ನಡ ಮತಪ್ರಸಂಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಗಂಡಿಬಾಗಿಲು ಮದ್ರಸದ ಹಿರಿಯ ವಿದ್ಯಾರ್ಥಿ ಆಶಿಕ್ ಮತ್ತು ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೇನ್‌ರನ್ನು ಸನ್ಮಾನಿಸಲಾಯಿತು.