ಬಿಸರಹಳ್ಳಿ ಶ್ರೀ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಗವಿಸಿದ್ದೇಶ್ವರ ಪುರಾಣ ಕಾರ್ಯಕ್ರಮ ನಡೆಯಿತು. ಹೂವಿನಹಡಗಲಿಯ ಡಾ. ಶ್ರೀ ಹಿರೇಶಾಂತವೀರ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಬಳ್ಳಾರಿಯ ಶ್ರೀ ಕಲ್ಯಾಣ ಸ್ವಾಮೀಜಿ, ಭಾಸ್ಕರ ವೇ.ಆರ್, ಶರಣಬಸವ ಶಾಸ್ತ್ರಿ ಇತರರಿದ್ದರು. 
ಜಿಲ್ಲೆ

ಸಾಮಾಜಿಕ ಕಾರ್ಯದಿಂದ ಮನಃಶಾಂತಿ: ಡಾ. ಶ್ರೀ ಹಿರೇಶಾಂತವೀರ ಸ್ವಾಮೀಜಿ ಅನಿಸಿಕೆ

ಅಳವಂಡಿ: ಪ್ರತಿಯೊಬ್ಬರೂ ಪುರಾಣ, ಪುಣ್ಯಕಥೆ, ನಾಟಕ, ಕ್ರೀಡೆ, ಧಾರ್ಮಿಕ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡಾಗ ಮಾತ್ರ ಮನಃಶಾಂತಿ ದೊರೆಯುತ್ತದೆ. ಇದರಿಂದ ಸಾಮೂಹಿಕ ಒಗ್ಗಟ್ಟಿನ ಭಾವನೆ ಮೂಡುತ್ತದೆ ಎಂದು ಹೂವಿನಹಡಗಲಿಯ ಡಾ. ಶ್ರೀ ಹಿರೇಶಾಂತವೀರ ಸ್ವಾಮೀಜಿ ಹೇಳಿದರು.

ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ

ಸಮೀಪದ ಬಿಸರಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗವಿಸಿದ್ದೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರಾಣಗಳನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಜತೆಗೆ ಶರಣರ ಇತಿಹಾಸ, ಮತ್ತು ಅವರ ಸಾಧನೆ ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಇದನ್ನೂ ಓದಿ: ಪುರಾಣ ಆಲಿಸುವುದರಿಂದ ಮನಶುದ್ಧಿ
ಪಂ.ಪುಟ್ಟರಾಜ ಗವಾಯಿಗಳ ಶಿಷ್ಯರಾದ ಪ್ರವಚನಕಾರ ಭಾಸ್ಕರ ವೇ.ಆರ್., ಶರಣಬಸವ ಶಾಸ್ತ್ರಿ ಇಲಕಲ್, ಶಿವಕುಮಾರ ಶಾಸ್ತ್ರಿ ಹಿರೇಮಠ ಸಂಗೀತ ಹಾಗೂ ವೀರೇಶ ಹಿರೇಮಠ ತಬಲಾದೊಂದಿಗೆ ಪುರಾಣ ಕಾರ್ಯಕ್ರಮ ನಡೆಯಿತು. ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಬಳ್ಳಾರಿಯ ಶ್ರೀ ಕಲ್ಯಾಣ ಸ್ವಾಮೀಜಿ, ಪ್ರಮುಖರಾದ ನಾಗಪ್ಪ ಬಿಕನಳ್ಳಿ, ಅಂದಪ್ಪ ಶಿಳ್ಳಿನ, ಯಂಕರಡ್ಡಿ ಅಂತೂರ, ಅಂದಯ್ಯ ಹಿರೇಮಠ, ಮಹೇಂದ್ರಗೌಡ ಮಾಲಿಪಾಟೀಲ, ಹಾಲಪ್ಪ ಮೈನಳ್ಳಿ, ಗ್ರಾಮಸ್ಥರು ಇದ್ದರು.