More

    ಪುರಾಣ ಆಲಿಸುವುದರಿಂದ ಮನಶುದ್ಧಿ

    ಯಾದಗಿರಿ: ಪ್ರತಿಯೊಬ್ಬ ಮನುಷ್ಯ ಸಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾರೆ, ಸಂಸಾರ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂತಹ ಬೇಸರ ದೂರ ಮಾಡಿ ಶಾಂತಿ, ಸಹನೆ, ತಾಳ್ಮೆ ಮೂಡಬೇಕಾದರೆ ಪುರಾಣ ಆಲಿಸುವುದರಿಂದ ಮಾತ್ರ ಸಾಧ್ಯ ಎಂದು ಅಬ್ಬೆತುಮಕೂರಿನ ಮಠಾಧಿಪತಿ ಡಾ. ಗಂಗಾಧರ ಶ್ರೀ ನುಡಿದರು.

    ಸೋಮವಾರ ರಾತ್ರಿ ಶ್ರೀಮಠದಲ್ಲಿ ಪುರಾಣ ಪ್ರವಚನ ಮತ್ತು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಮಹಾಂತರು. ಎಲ್ಲರಂತೆ ಅವರು ಕೂಡ ಸಂಸಾರಿಕ ಜೀವನದಲ್ಲಿದ್ದರೂ ಕೂಡ ಜಲಪತ್ರದ ಮೇಲಿನ ಬಿಂದುವಿನಂತೆ ಅವರು ಎಂದೂ ಸಂಸಾರಕ್ಕೆ ಅಂಟಿಕೊಳ್ಳಲಿಲ್ಲ. ನಶ್ವರ ಸಂಸಾರಿಕ ಜೀವನವನ್ನು ನಚ್ಚಿಕೊಳ್ಳದೆ ಪಾರಮಾಥರ್ಿಕ ಬದುಕಿನಲ್ಲಿ ಓಲಾಡಿ ಸಾಧನೆಯ ಸಿದ್ಧಿಯನ್ನು ಮೆರೆದ ಸಿದ್ಧಿಪುರುಷರಾಗಿದ್ದರು ಎಂದರು.

    ವಿಶ್ವಾರಾಧ್ಯರು ತಮ್ಮ ತಪಬಲದಿಂದ ಸಂಪಾದಿಸಿಕೊಂಡ ಜ್ಞಾನವನ್ನು ಈ ಲೋಕದ ಜನತೆಗೆ ಉಣಬಡಿಸಲು ಲೋಕಸಂಚಾರ ಕೈಗೊಂಡ ಮಹಾ ಮಹಿಮರಾಗಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲ ಜನತೆಯನ್ನು ಉದ್ದರಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಮಹಾಪುರುಷ ಅವರಾಗಿದ್ದಾರೆ ಎಂದು ಹೇಳಿದರು.

    ಇಂತಹ ಮಹಾಮಹಿಮನ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ವಿಶ್ವಾರಾಧ್ಯರ ಪುರಾಣ ನಿರಂತರವಾಗಿ 11 ದಿನಗಳ ಕಾಲ ನಡೆಯಲಿದ್ದು, ಎಲ್ಲ ಭಕ್ತರು ಪ್ರತಿದಿನ ಪುರಾಣ ಆಲಿಸುವುದರ ಮೂಲಕ ತಮ್ಮ ತನು-ಮನಗಳನ್ನು ಶುದ್ಧಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಪುರಾಣ ಪ್ರಾರಂಭೋತ್ಸವದ ನಿಮಿತ್ತವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು ನೆರವೇರಿಸಲಾಯಿತು.

    ಖ್ಯಾತ ಪುರಾಣ ಪ್ರವಚನಕಾರರಾದ ಮಲ್ಲಿಕಾಜರ್ುನ ಶಾಸ್ತ್ರಿ ಐನಾರ, ಪುರಾಣದ ಮೊದಲ ಅಧ್ಯಾಯವನ್ನು ವಾಚನ ಮಾಡುವುದರ ಮೂಲಕ ಪುರಾಣ ಆರಂಭಿಸಿದರು. ಡಾ. ಸುಭಾಶ್ಚಂದ್ರ ಕೌಲಗಿ, ಎಸ್.ಎನ್.ಮಿಂಚಿನಾಳ, ಕೊಟ್ರೇಶ ಹಿರೇಮಠ, ಮಠದ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts