ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗೆ ಗಣ್ಯರು ಚಾಲನೆ ನೀಡಿದರು . ಪ್ರಮುಖರಾದ ಭರಮಪ್ಪ ನಗರ, ನಿಂಗನಗೌಡ, ವಿಷ್ಣು, ಗುಡದಪ್ಪ, ತೋಟಪ್ಪ, ವೀರಣ್ಣ, ಲಕ್ಕಪ್ಪ ಇತರರಿದ್ದರು 
ಜಿಲ್ಲೆ

ಸ್ಮಾರ್ಟ್‌ಕ್ಲಾಸ್ ಸದ್ಬಳಕೆಯಾಗಲಿ

Kopala - Desk - Eraveni

ಅಳವಂಡಿ: ಕಾಲಕ್ಕೆ ತಕ್ಕಂತೆ ಮಕ್ಕಳು ಕೂಡ ಜ್ಞಾನಾರ್ಜನೆ ಮಾರ್ಗ ಬದಲಿಸಿಕೊಳ್ಳಬೇಕು. ಮಾಧ್ಯಮಗಳಲ್ಲಿ ಬರುವ ಬೋಧನೆ ವಿಷಯ ಹಾಗೂ ಸಾಮಾನ್ಯ ಜ್ಞಾನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ವೀರಣ್ಣ ಮಟ್ಟಿ ತಿಳಿಸಿದರು.

ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಸ್ಮಾರ್ಟ್ ಕ್ಲಾಸ್ ಬಳಕೆಯಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತದೆ. ಜಗತ್ತು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡು ವೇಗವಾಗಿ ಓಡುತ್ತಿದೆ. ಅದಕ್ಕೆ ತಕ್ಕ ಅಭ್ಯಾಸ ಕೂಡ ಮಕ್ಕಳಿಗೆ ಸಿಗಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ನಿಂಗನಗೌಡ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ ಚಿಲವಾಡಗಿ, ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ ಶಿಂಟ್ರ, ವಿಷ್ಣು ಹಾಳಕೇರಿ, ಲಕ್ಕಪ್ಪ ಮೇಟಿ, ಗವಿಸಿದ್ದಪ್ಪ ತಳಕಲ್, ಖಾಜೇಸಾಬ ಹುಡೇದಮನಿ, ಹನುಮಗೌಡ ಗೌಡ್ರ, ಯಮನೂರಪ್ಪ ಶಿಂಟ್ರ, ಈರಪ್ಪ ಬಳ್ಳಾರಿ, ಲಕ್ಷ್ಮಣ ವಡಕಿ, ಕೊಟ್ರಪ್ಪ ಮಗಡ್ರ ಇತರರಿದ್ದರು.