ಮೂಡುಬಿದಿರೆ: ತಾಕೊಡೆ ಶಾಲಾ ಸಭಾಂಗಣದಲ್ಲಿ ಐದು ದಿನಗಳು ನಡೆದ ಉಚಿತ ಸೀರೆ ಗೊಂಡೆ ಹಾಕುವ ಕೌಶಲ ತರಬೇತಿ ಸಮಾಪನಗೊಂಡಿತು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಮೂಡುಬಿದಿರೆ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಪವಿತ್ರ ಶಿಲುಬೆಯ ದೇವಾಲಯ ತಾಕೊಡೆ ಹಾಗೂ ಸ್ತ್ರೀ ಸಂಘಟನೆ ತಾಕೊಡೆ ಘಟಕ ಆಶ್ರಯದಲ್ಲಿ ತರಬೇತಿ ನಡೆಯಿತು.
ತಾಕೊಡೆ ಚರ್ಚ್ ಧರ್ಮಗುರು ರೋಹನ್ ಲೋಬೊ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿ ಶುಭಲಕ್ಷ್ಮೀ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಿಇಒ ಜ್ಯೋತಿ ರಾಜ್, ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ, ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಆಲ್ವಿನ್ ಪಿಂಟೊ, ಆಯೋಗ ಸಂಯೋಜಕ ಪಾವ್ಲ್ ಡಿಸೋಜ, ಬೆಥೆನಿ ಕಾನ್ವೆಂಟ್ ಸುಪೀರಿಯರ್ ಸಿಸ್ಟೆರ್ ರೀನಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ಐವಿ ಕ್ರಾಸ್ತ ಉಪಸ್ಥಿತರಿದ್ದರು.
ಸ್ತ್ರೀ ಸಂಘಟನೆ ಕಾರ್ಯದರ್ಶಿ ಶಾಂತಿ ಪಿಂಟೋ ಸ್ವಾಗತಿಸಿದರು. ಲೋನಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಲೀಜಾ ರೋಡ್ರಿಗಸ್‌ವಂದಿಸಿದರು.