ಜಿಲ್ಲೆ

ಕವತ್ತಾರು ಆಲಡೆ ದೈವಗಳ ಪುನಃ ಪ್ರತಿಷ್ಠಾಪನೆ

ಸೌಮ್ಯ ಆರ್

ಕಿನ್ನಿಗೋಳಿ: ಸಿರಿ ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕವತ್ತಾರು ಆದಿ ಆಲಡೆ ಪರಿವಾರ ದೈವಗಳಾದ ಬ್ರಹ್ಮ, ಮೈಸಂದಾಯ, ರಕ್ತೇಶ್ವರಿ, ಭೂತರಾಜ, ಜುಮಾದಿ, ಜಾರಂದಾಯ ಹಾಗೂ ಪಂಜುರ್ಲಿ ದೈವಗಳ ಪುನಃಪ್ರತಿಷ್ಠಾಪನಾ ಮಹೋತ್ಸವ ಗುರುವಾರ ಮತ್ತು ಶುಕ್ರವಾರ ನಡೆಯಿತು.

ಆ ಪ್ರಯುಕ್ತ ಆಲಯ ಪರಿಗ್ರಹ, ಸಪ್ತ ಶುದ್ಧಿ ಮತ್ತಿತರ ಧಾರ್ಮಿಕ ಕಾರ್ಯಕ್ರಮ, ಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ, ಮೈಸಂದಾಯ, ಭೂತರಾಜ, ರಕ್ತೇಶ್ವರಿ, ಪಂಜುರ್ಲಿ, ಜಾರಂದಾಯ ದೈವಗಳಿಗೆ ಕಲಶಾಭಿಷೇಕ, ಶಿಬರೂರು ವೇದವ್ಯಾಸ ತಂತ್ರಿ ದೇಂದಡ್ಕ ವಿಷ್ಣುರಾಜ್ ಪಿ.ಭಟ್ ನೇತೃತ್ವದಲ್ಲಿ ನಡೆಯಿತು.

ಆಡಳಿತ ಮೊಕ್ತೇಸರೆ ನೀನಾ ನಿತ್ಯಾನಂದ ಅಜಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ, ದಾನಿಗಳಾದ ಯೋಗಿಶ್ವರ ಶೆಟ್ಟಿ, ವತ್ಸಲಾಶೆಟ್ಟಿ, ನರೇಂದ್ರನಾಥ ಶೆಟ್ಟಿ, ಪುಷ್ಪಾ ಎನ್.ಶೆಟ್ಟಿ, ತ್ರಿವೇಣಿ ಶೆಟ್ಟಿ, ಶಿವ ಚಂದ್ರ ಶೆಟ್ಟಿ, ಲತಾ ಸಾಧು ಶೆಟ್ಟಿ, ಸುಹಾಸಿನಿ ವಿಜೀತ್ ಶೆಟ್ಟಿ ಪುತ್ತೂರು ಬಾಳಿಕೆ, ಮನೋಹರಿ ಕೃಷ್ಣ ಶೆಟ್ಟಿ, ಸಂಧ್ಯಾ, ಜನಾನಂದ ಶೆಟ್ಟಿ, ಶೈಲಿನಿ ರಬೀಂದ್ರನಾಥ ಶೆಟ್ಟಿ ಕೊಲ್ನಾಡ್ ಗುತ್ತು, ಶಮಿಲಾ, ವಾಣಿಶ್ರೀ, ವಿಜಯ, ಅಂಬಾ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.