ಉತ್ತನೂರು ಗ್ರಾಮದಲ್ಲಿ ಉತ್ತರೇಶ್ವರ ಸ್ವಾಮಿ ಜಾತ್ರೆ ನಿಮಿತ್ತ ಮಂಗಳವಾರ ರಕ್ತದಾನ ಶಿಬಿರ ನಡೆಯಿತು. 
ಜಿಲ್ಲೆ

ಉತ್ತನೂರು ಗ್ರಾಮದಲ್ಲಿ ಜಾತ್ರೆ ನಿಮಿತ್ತ ರಕ್ತದಾನ ಶಿಬಿರ

ಶಶಿಧರ ಎಲ್

ಸಿರಗುಪ್ಪ: ತಾಲೂಕಿನ ಉತ್ತನೂರು ಗ್ರಾಮದಲ್ಲಿ ಶ್ರೀ ಉತ್ತರೇಶ್ವರ ಸ್ವಾಮಿ ಜಾತ್ರೆ ನಿಮಿತ್ತ ಜಿಲ್ಲಾ ಆರೋಗ್ಯ ಇಲಾಖೆ, ಟಾಸ್ಕ್‌ಫೋರ್ಸ್ ಸಮಿತಿ (ರಕ್ತ ಸುರಕ್ಷತೆ), ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಬಳ್ಳಾರಿ, ಕರೂರು ಪಿಎಚ್‌ಸಿಯಿಂದ ಮಂಗಳವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಪಿಎಚ್‌ಸಿ ಡಾ.ಬಾಲಾಜಿ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯರಲ್ಲಿ ಇರುವ ರಕ್ತವನ್ನು ತುರ್ತು ಅಗತ್ಯ ಇರುವವರಿಗೆ ನೀಡಿ ಜೀವ ಉಳಿಸಬೇಕು. ಆದ್ದರಿಂದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇ ಎಂದರು.

ಶಿಬಿರದಲ್ಲಿ 25 ಜನ ರಕ್ತದಾನ ಮಾಡಿದರು. ವಿವೇಕಾನಂದ ರಕ್ತ ಭಂಡಾರದ ವ್ಯವಸ್ಥಾಪಕ ಜಿ.ಗೋಪಾಲರೆಡ್ಡಿ, ಆಸ್ಪತ್ರೆ ಸಿಬ್ಬಂದಿ ರೇಣುಕಾ, ಜಿ.ಯಂಕಪ್ಪ, ಬಳ್ಳಾರೆಪ್ಪ, ಮುಕ್ಕಣ್ಣ, ಮಾರೆಪ್ಪ, ಜಗದೀಶಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಗ್ರಾಪಂ ಸದಸ್ಯರಾದ ಈಶ್ವರಗೌಡ, ಕೆ.ಎಂ.ಶರಣಯ್ಯಸ್ವಾಮಿ,

ಕಾರ್ಯದರ್ಶಿ ಶಿವಮೂರ್ತಿ, ಪ್ರಮುಖರಾದ ವಿ.ಶಿವನಗೌಡ, ಜೆ.ವೀರನಗೌಡ, ಶಿವಕುಮಾರ, ಮಲ್ಲಿಕಾರ್ಜುನ, ಸತೀಶ, ದೇವೇಂದ್ರಗೌಡ, ಈ.ಬಸವರಾಜ, ಜಡೇಶ, ವೈ.ಹೊನ್ನೂರಪ್ಪ, ಕೆ.ಚಾಗಪ್ಪ, ಎಂ.ರವಿ ಇತರರಿದ್ದರು.