ಹೂವಿನಹಡಗಲಿ ತಹಸೀಲ್ದಾರ್ ಸಂತೋಷ್‌ಕುಮಾರ್‌ಗೆ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷೆ ಮಾಳಮ್ಮ, ತಾಲೂಕು ಸಂಚಾಲಕಿ ಪಾರ್ವತಿ, ಸಹಸಂಚಾಲಕಿ ವಿನೋದಾ, ಸದಸ್ಯರಾದ ಗಂಗವ್ವ, ರಾಧಮ್ಮ, ಹೊನ್ನಮ್ಮ, ಸುವರ್ಣಾ ಇತರರಿದ್ದರು. 
ಜಿಲ್ಲೆ

ಒಂಟಿ ಮಹಿಳೆಯರಿಗೆ ನಿರುದ್ಯೋಗ ಭತ್ಯೆ ನೀಡಿ

Kopala - Desk - Eraveni

ಹೂವಿನಹಡಗಲಿ: ಒಂಟಿ ಮಹಿಳೆಯರಿಗೆ ಮನೆ, ನಿವೇಶನ, ಮಾಸಾಶನ ನೀಡುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಅಧ್ಯಕ್ಷೆ ಮಾಳಮ್ಮ ಮಾತನಾಡಿ, ರಾಜ್ಯದಲ್ಲಿ ಒಂಟಿ ಮಹಿಳೆಯರು ಲಿಂಗ, ಜಾತಿ ತಾರತಮ್ಯ ಹಾಗೂ ಸಾಮಾಜಿಕ ಭಹಿಷ್ಕಾರಕ್ಕೆ ಒಳಗಾಗಿದ್ದಾರೆ. ನಾನಾ ಕಾರಣಗಳಿಂದ ಒಂಟಿಯಾಗಿ ಜೀವಿಸುವ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಮಾಸಿಕ ಐದು ಸಾವಿರ ರೂ. ಸಹಾಯಧನ ನೀಡಬೇಕು. ಗಂಡ ಬಿಟ್ಟ ಮಹಿಳೆಯ ಮರುಮದುವೆಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ಒಂಟಿ ಮಹಿಳೆಗೆ ನಿರುದ್ಯೋಗ ಭತ್ಯೆ ಅಥವಾ ಮಾಸಿಕ 10 ಸಾವಿರ ರೂ. ಒದಗಿಸಬೇಕು ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.