ಸಿಂಧನೂರಿನ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಸಂಸ್ಕಾರ ಭಾರತಿ ಸಂಚಾಲಕ ವೆಂಕಣ್ಣಾಚಾರ್ಯ ದೋಟಿಹಾಳ, ವೀರಭದ್ರಯ್ಯಸ್ವಾಮಿ ಹಿರೇಮಠ ಹಸಮಕಲ್, ರಾಮಕೃಷ್ಣ ಆಚಾರ್ಯ ಗೋನ್ವಾರ, ಉದ್ಯಮಿ ರಾಜೇಶ ಹಿರೇಮಠ, ಎಚ್.ವೇದಮೂರ್ತಿ ಇದ್ದರು. 
ಜಿಲ್ಲೆ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಸಂಸ್ಕಾರ ಭಾರತಿ ಸಂಚಾಲಕ ವೆಂಕಣ್ಣಾಚಾರ್ಯ ದೋಟಿಹಾಳ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಸಿಂಧನೂರು: ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಸಂಸ್ಕಾರ ಭಾರತಿ ಸಂಚಾಲಕ ವೆಂಕಣ್ಣಾಚಾರ್ಯ ದೋಟಿಹಾಳ ಹೇಳಿದರು.

ನಗರದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ಶ್ರೀಗುರು ಪುಟ್ಟರಾಜ ನಾದವೈಭವ ಕಲಾ ಟ್ರಸ್ಟ್, ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಗುರು ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಸಂಗೀತದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳುವುದಲ್ಲದೆ ಮಕ್ಕಳಿಗೂ ಅದರ ಆಸಕ್ತಿ ಬರುವಂತೆ ಮಾಡಬೇಕೆಂದು ಅವರು, ಸಂಗೀತಕ್ಕೆ ರೋಗ ನಿವಾರಿಸುವ ಶಕ್ತಿ ಇದೆ ಎಂದರು.

ವೀರಭದ್ರಯ್ಯಸ್ವಾಮಿ ಹಿರೇಮಠ ಹಸಮಕಲ್, ರಾಮಕೃಷ್ಣ ಆಚಾರ್ಯ ಗೋನ್ವಾರ, ಉದ್ಯಮಿ ರಾಜೇಶ ಹಿರೇಮಠ, ಎಚ್. ವೇದಮೂರ್ತಿ, ಧರಯ್ಯಸ್ವಾಮಿ, ಸರೋಜಮ್ಮ ಸಂಗಯ್ಯಸ್ವಾಮಿ, ಸರಿತಾ ರಾಜು ಬಂಡಿ, ವೇದಮೂರ್ತಿ ದೊಡ್ಡಬಸಯ್ಯ ಶಾಸ್ತ್ರಿ ಇದ್ದರು. ಗದಗಿನ ವೀರೇಶ್ವರ ಪುಣ್ಯಾಶ್ರಮದ ವೆಂಕಟೇಶಕುಮಾರ ಗಲಗ, ಕೊಪ್ಪಳ ಸಂಗೀತ ವಿದ್ಯಾಪೀಠದ ಹಾರ್ಮೋನಿಯಂ ವಾದಕ ವೀರೇಶ ಹಿಟ್ನಾಳ, ಮಹಾಂತಯ್ಯಸ್ವಾಮಿ ಗೋನ್ವಾರ, ರಾಘವೇಂದ್ರ ಗಂಗಾವತಿ, ಮಲ್ಲಿಕಾರ್ಜುನ ಉಂಬಳೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.