ಸಿಂಧನೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ಬಂಜಾರ, ಭೋ ವಿ, ಕೊರಮ, ಕೊರಚ, ಸಮಾಜಕ್ಕೆ ಅನ್ಯಾಯ ಮಾಡಿರುವುದನ್ನು ಖಂಡಿಸಿ ಬಂಜಾರ, ಭೋವಿ, ಕೊರಮ, ಕೊರಚ ಮೀಸಲಾತಿ ಒಕ್ಕೂಟ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.
ಸರ್ಕಾರ ಏಕಪಕ್ಷೀಯವಾಗಿ ದೋಷಪೂರಿತ ದತ್ತಾಂಶ ಪರಿಗಣಿಸಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ನಮ್ಮ ಸಮಾಜಕ್ಕೆ ದ್ರೋಹ ಮಾಡಿದೆ. ಭೋವಿ, ಲಂಬಾಣಿ, ಕೊರಮ, ಕೊರಚ, ಸಮುದಾಯಗಳಿಗೆ ಈ ಹಿಂದಿನ ಸರ್ಕಾರ ಶೇ.4.5 ಒಳಮೀಸಲಾತಿ ನಿಗದಿಪಡಿಸಿದಾಗ ಘೋಷಣೆ ಕೂಗಿ ಚುನಾವಣೆಯಲ್ಲಿ ಸೋಲಿಸುವಂತಾಯಿತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸಿ ನ್ಯಾಯ ಒದಗಿಸುತ ್ತದೆಂಬ ನಿರೀಕ್ಷೆಗೆ ಹುಸಿಯಾಗಿದೆ. ಇದರ ಬಗ್ಗೆ ನಮ್ಮ ಜನಾಂಗದ ಕಾಂಗೆ ್ರಸ್ ನಾಯಕರು ಯಾವುದೇ ಪ್ರತಿರೋಧ ವ್ಯಕ್ತಪಡಿಸಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಡ್ತಿಯಲ್ಲಿ ಒಳಮೀಸಲಾತಿ ಶೀಘ್ರ ಜಾರಿ | C S assurance
ನ್ಯಾ.ನಾಗಮೋಹನ್‌ದಾಸ್ ವರದಿಯಲ್ಲಿ ಭೋವಿ, ಬಂಜಾರ, ಸಮುದಾಯದ ಏರಿಕೆ ಕಡಿಮೆ ಎಂದು ತೋರಿಸಿ, 28 ಲಕ್ಷ ಜನಸಂಖ್ಯೆಯಿರುವ ಭೋವಿ, ಬಂಜಾರ, ಕೊರಮ, ಕೊರಚ, ಗುಂಪಿಗೆ ಶೇ.4 ಮೀಸಲಾತಿ ನಿಗದಿಪಡಿಸಿದ್ದರು. ನಮಗಿಂತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆಯಿರುವ ಇತರ ಉಪಜಾತಿಗಳ ಗುಂಪಿಗೆ ಎರಡು ಜಾತಿಗಳನ್ನು ಸೇರಿಸಿ, ಶೇ.5 ರಿಂದ ಶೇ.6 ಕ್ಕೆ ಹೆಚ್ಚಿಸಲಾಗಿದೆ. ಇದು ಪಕ್ಷಪಾತದ ನಿರ್ಣಯವಾಗಿದೆ. ನಮ್ಮ ಗುಂಪಿಗೆ 59 ಜಾತಿಗಳನ್ನು ಸೇರಿಸಿ ಮೀಸಲಾತಿ ಶೇ.4 ರಿಂದ ಶೇ.5ಕ್ಕೆ ಹೆಚ್ಚಿಸಿರುವುದು ಸರಿಯಲ್ಲ. ಹಾಗಾಗಿ ಒಳಮೀಸಲಾತಿ ಅನ್ಯಾಯ ಸರಿಪಡಿಸಿ, ಮರು ವರ್ಗೀಕರಣ ಮಾಡಿ, ಶೇ.6 ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕರಾದ ಗೋವಿಂದರಾಜ ಭೋವಿ, ರಾಮಕೃಷ್ಣ ಭಜಂತ್ರಿ, ಚನ್ನಪ್ಪ ಪವರ್, ಹೊಳೆಯಪ್ಪ ಕೊರಚ, ವೀರೇಶ ಸಿದ್ರಾಂಪುರ, ರವಿ ರಾಠೋಡ್, ಹನುಮಂತ ಭಜಂತ್ರಿ, ಕಾಶಪ್ಪ ಮೇಸ್ತ್ರಿ, ಕೃಷ ್ಣಪ್ಪ ರಾಠೋಡ್, ಹನುಮಂತ, ಲಕ್ಷ್ಮಣ ಭೋವಿ, ಶ್ರೀನಿವಾಸ ಮೇಸ್ತ್ರಿ, ಲಕ್ಷ್ಮಣ ಸಾಲಗುಂದ, ಹನುಮಂತ ಕಾರ‌್ಲಕುಂಟಿ, ಚನ್ನಪ್ಪ ಪವಾರ, ರಾಮೂಲು ವಕೀಲ, ಮಲ್ಲಿಕಾರ್ಜುನ, ನೀಲಕಂಠಪ್ಪ ಭಜಂತ್ರಿ, ಮಹೇಶ ಇಲಕಲ್, ರಾಮು ಹೊಸಪೇಟೆ ಇತರರು ಇದ್ದರು.